ಬೀಜ ಪರೀಕ್ಷೆಗೆ ” ಕೃಷಿ ಸಂಜೀವಿನಿ” ಸಂಚಾರಿ ವಾಹನ


ಕುಳಗೇರಿ ಕ್ರಾಸ್,ಮೇ.19: ರೈತರಿಗಾಗಿ “ಕೃಷಿ ಸಂಜೀವಿನಿ” ಲ್ಯಾಬ್ ಟು ಲ್ಯಾಂಡ್ ಸಂಚಾರಿ ಕೃಷಿ ವಾಹನವನ್ನ ಸರ್ಕಾರ ಬಿಡುಗಡೆ ಮಾಡಿದ್ದು ಬಿತ್ತುವ ಬೀಜಗಳನ್ನ ಕೃಷಿ ಸಂಜೀವಿನಿ ಲ್ಯಾಬ್ ಮೂಲಕ ಪರೀಕ್ಷೆ ಮಾಡಿ ನಂತರ ರೈತರಿಗೆ ಕೊಡುವ ವ್ಯವಸ್ಥೆಯನ್ನ ಮಾಡಲಾಗಿದೆÉ. ಕಾರಣ ಇದರ ಸದುಪಯೋಗವನ್ನ ಪಡೆದುಕೊಳ್ಳುವಂತೆ ಕೃಷಿ ಅಧಿಕಾರಿ ಬಸವರಾಜ ಬುದ್ನಿ ರೈತರಲ್ಲಿ ಮನವಿ ಮಾಡಿದರು.
ಕೃಷಿ ಸಂಜೀವಿನಿ ವಿಷಯ ತಂಡದ ತಜ್ಞರೊಂದಿಗೆ ಗ್ರಾಮದ ರೇಣುಕಾ ಟ್ರೇಡರ್ಸ್, ಪೂರ್ಣಾನಂದ ಸ್ರೇಡರ್ಸ್ ಸೇರಿದಂತೆ ಹಲವು ಬೀಜ ಮತ್ತು ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ರೈತರೆದುರು ಕೃಷಿ ಸಂಜೀವಿನಿ ವ್ಯಾನ್ ಮೂಲಕ ಬಿಟಿ ಹತ್ತಿ ಗುಣಮಟ್ಟ ಪರೀಕ್ಷೆ ಮಾಡಿದ ಕೃಷಿ ಅಧಿಕಾರಿಗಳು ಕೃಷಿ ಸಂಜೀವಿನಿಯ ಹಲವಾರು ಮಾಹಿತಿಯನ್ನ ರೈತರಿಗೆ ನೀಡಿದರು.
ರೈತರೆದುರೆ ಬೀಜ ಪರೀಕ್ಷೆ: ಇದೆ ಸಂದರ್ಭದಲ್ಲಿ ಗ್ರಾಮದ ರಸಗೊಬ್ಬರ ಅಂಗಡಿಗಳಲ್ಲಿ ಬೀಜ ಮತ್ತು ಗೊಬ್ಬರ ಕಲಬೆರಿಕೆ ಯಾಗಿದೆಯೇ ಅಥವಾ ನಕಲಿ ಎಂದು ರೈತರೆದುರೆ ಸುಲಭ ಪರೀಕ್ಷೆಯ ಪ್ರಾತ್ಯಕ್ಷಿಕೆಯನ್ನ ಮಾಡಲಾಯಿತು. ರೈತರು ಸಹ ಇನ್ನು ಮುಂದೆ ರಸಗೊಬ್ಬರ ಸೇರಿದಂತೆ ಬೀಜಗಳನ್ನು ಖರಿದಿಸುವ ಮುನ್ನವೇ ಗುಣಮಟ್ಟವನ್ನ ಪರೀಕ್ಷಿಸಿ ಕರಿದಿಸಬಹುದಾಗಿದೆ.
ಕೃಷಿ ಸಂಜೀವಿನಿ ತಾಂತ್ರಿಕ ಸಲಹೆಗಾರ ಮಹಾಂತೇಶ ಕುಂಟೋಜಿ ರಸಗೊಬ್ಬರ ಅಂಗಡಿಯಲ್ಲಿ ರೈತರ ಸಮ್ಮುಖದಲ್ಲಿ ಬಿಟಿ ಹತ್ತಿ ಗುಣಮಟ್ಟ ಪರೀಕ್ಷೆ ಮಾಡಿದರು. ಸಹಾಯಕ ಕೃಷಿ ಅಧಿಕಾರಿ ಎಂ ಎಚ್ ನರಿ, ಆತ್ಮಾ ತಾಂತ್ರಿಕ ವ್ಯವಸ್ಥಾಪಕ ಶಿವನಗೌಡ ಗೌಡರ್, ಅಶೋಕ ಮಾಸರಡ್ಡಿ, ರೇಣುಕಾ ಟ್ರೇಡರ್ಸ್ ಸುನಿಲ ಹಲಗತ್ತಿ, ಪೂರ್ಣಾನಂದ ಟ್ರೇಡರ್ಸ್ ಪುನೀತ್ ಬಿಲ್ಲಾರ, ಶಿವಾನಂದಗೌಡ ಗೌಡರ, ಕೆಂಚಪ್ಪ ಹಟ್ಟಿ, ಮಂಜು ಕುರಿ ಸೇರಿದಂತೆ ರೈತರು ಹಾಜರಿದ್ದರು.
[ಈ ಸಂಚಾರಿ ವಾಹನದ ಸೌಲಭ್ಯದಿಂದ ಹೆಚ್ಚು ರೈತರಿಗೆ ಭೇಟಿ ನೀಡಲು ಸಹಕಾರಿಯಾಗಲಿದೆ. ಈ ಮೂಲಕ ರೈತರು ಕಲಬೆರಿಕೆ ರಸಗೊಬ್ಬರ ಕಂಡುಹಿಡಿದು ಗುಣಮಟ್ಟದ ರಸಗೊಬ್ಬರ ಕರಿದಿಸಲು ಅನಕೂಲವಾಗಲಿದೆ. ಇದರಿಂದ ರೈತರು ರಸಗೊಬ್ಬರಗಳ ಗುಣಮಟ್ಟವನ್ನು ಮೊದಲೇ ತಿಳಿಯಬಹುದಾಗಿದೆ. ರೈತರು 155313 ಈ ಸಹಾಯವಾಣಿ ಸಂಖ್ಯಗೆ ಉಚಿತವಾಗಿ ಕರೆಮಾಡಿ ತಮ್ಮ ಸಮಸ್ಯೆಗಳನ್ನ ತಿಳಿಸಬಹುದು. ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‍ನಂತೆ ಈ ಸಹಾಯವಾಣಿ ಕೆಲಸ ಮಾಡಲಿದೆ. ರೈತರು ಚಿಲ್ಲರೇ ಬೀಜಗಳನ್ನ ತೆಗೆದುಕೊಳ್ಳಬಾರದು. ಅಂಗಡಿಗಳಲ್ಲಿ ಬೀತ್ತೆನೆ ಬೀಜ ಜೊತೆಗೆ ರಸಿದೆ ಪಡೆದುಕೊಳ್ಳಬೇಕು. ಕೃಷಿ ಅಧಿಕಾರಿ ಬಸವರಾಜ ಬುದ್ನಿ]