ಬೀಜೋಪಚಾರ, ತರಬೇತಿ ಕಾರ್ಯಾಗಾರ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಅ13 : ತಾಲೂಕಿನ ಗೊಜನೂರು ಮಾಗಡಿ ಮತ್ತು ಲಕ್ಷ್ಮೇಶ್ವರ ಭಾಗದ ರೈತರಿಗೆ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಯಿಂದ ಎಣ್ಣೆ ಬೀಜ ಕುರಿತು ಬೀಜೋಪಚಾರ ಮತ್ತು ತರಬೇತಿ ಕಾರ್ಯಾಗಾರವನ್ನು ಗೊಜನೂರು ಗ್ರಾಮದ ಚೆನ್ನಪ್ಪ ಷಣ್ಮುಖಿ ಅವರ ಜಮೀನಿನಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ, ಬಿ.ಎನ್. ಮೊಟಗಿ ,ಜಿ ಎನ್ ರೆಡ್ಡಿ, ಅವರು ರೈತರಿಗೆ ಸುಧಾರಿತ ಕುಸುಬಿ ಬೀಜಗಳ ಸಂಸ್ಕರಣೆ ಮತ್ತು ಎಣ್ಣೆ ಬೀಜಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ರೈತರು ಹಿಂಗಾರು ಹಂಗಾಮಿನಲ್ಲಿ ಬಹುತೇಕ ರೈತರು ಕುಸುಬಿ ಬೆಳೆಯಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿತ ಸುಧಾರಿತ ಸಂಶೋಧನಾ ಬೀಜಗಳನ್ನು ರೈತರು ಬಳಸಬೇಕು ಎಂದು ಹೇಳಿದರು.
ರೈತರು ಕುಸುಬಿ ಬೆಳೆಗೆ ಬರುವ ರೋಗಗಳು ಮತ್ತು ಕೀಟಗಳ ಹತೋಟಿಗೆ ಸಲಹೆ ಮತ್ತು ಉಪಾಯಗಳು ಕುರಿತು ಕೃಷಿ ವಿವಿಯ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದರು. ಚರ್ಚೆಯಲ್ಲಿ ರೈತರಾದ ಚೆನ್ನಪ್ಪ ಷಣ್ಮುಖ, ಶೇಖಪ್ಪ ಸೊರಟೂರ, ಸಾವಿರಕುರಿ, ಶಂಕ್ರಪ್ಪ ಮತ್ತು ಸೋಮಣ್ಣ ಸೊರಟೂರ ಅನೇಕರಿದ್ದರು.
ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರಾಜಶೇಖರ್ ಕಾಚಾಪುರ ಹೈದರಾಬಾದಿನ ನಾಗೇಶ, ಸಿದ್ದಪ್ಪ ಸೇರಿದಂತೆ ಅನೇಕರಿದ್ದರು.