ಬೀಚ್ ಅಭಿವೃದ್ಧಿಯ ಬದಲು ಜೆಟ್ಟಿ ನಿರ್ಮಿಸಲು ಆಗ್ರಹ


ಕಾಪು, ಜೂ.೧೦- ಸರ್ಕಾರ ಪ್ರವಾಸೋಧ್ಯಮ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುತ್ತಿದೆ. ಅದರ ಬದಲು ಮೀನುಗಾರಿಕಾ ಜಟ್ಟಿ ನಿರ್ಮಿಸಿ ಎಂದು ಮೀನುಗಾರಿಕಾ, ಬಂದರು ಸಚಿವ ಎಸ್. ಅಂಗಾರ ಮೀನುಗಾರರು ಒತ್ತಾಯಿಸಿದರು.
ಇತ್ತೀಚೆಗೆ ತೌಕ್ತೆ ಚಂಡಮಾರುತದಿಂದ ಕಡಲ್ಕೊರೆತ ಉಂಟಾಗಿ ಹಾನಿಗೊಳಗಾದ ಕಾಪು ಕ್ಷೇತ್ರದ ಕರಾವಳಿ ಪ್ರದೇಶಗಳಿಗೆ ಬುಧವಾರ ಭೇಟಿಗಾಗಿ ಕಾಪು ಬೀಚ್ಗೆಯ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರು ಸಚಿವರಲ್ಲಿ ಒತ್ತಾಯಿಸಿದರು. ಕಟಪಾಡಿಯ ಮಟ್ಟು, ಕಾಪುವಿನ ಕೈಪುಂಜಾಲು, ಪೊಲಿಪು, ಕಾಪು ಬೀಚ್, ಮುಳೂರು ಕಡಲ ತೀರ ಹಾಗೂ ಪಡುಬಿದ್ರೆ ಬೀಚ್ ಸಮೀಪದಲ್ಲಿ ಕಡಲ್ಕೊರೆತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದರು. ಕೆಲವು ಕಡೆ ಈಗಾಗಲೇ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭವಾಗಿದ್ದು, ಇನ್ನು ಹೆಚ್ಚಿನ ರೀತಿಯಲ್ಲಿ ಕಾಮಗಾರಿ ಪ್ರಾರಂಭಿಸಲು ಶಾಸಕರ ಶಿಫಾರಸ್ಸಿನ ಮೇರೆಗೆ ಅನುದಾನ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾ ಸುವರ್ಣ, ದ.ಕ ಜಲ್ಲಾ ಮೀನುಗಾರಿಕೆ ಇಲಾಖೆ ಹಿರಿಯ ಉಪ ನಿರ್ದೇಶಕ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಹಿರಿಯ ಉಪ ನಿರ್ದೇಶಕ ಗಣೇಶ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶನ ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕ ದಿವಾಕರ ಕಾರ್ವಿ, ಕಾಪು ತಹಶಿಲ್ದಾರ್ ಪ್ರತಿಭಾ ಆರ್,ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮೊದಲಾದವರು ಉಪಸ್ಥಿತರಿದ್ದರು.