ಬೀಗಿಬಂದೋಬಸ್ತ ನೊಂದಿಗೆ ಗ್ರಾಮ ಪಂಚಾಯತಿ ಚುನಾವಣೆ

ಸಂಡೂರು :ಡಿ:27 2ನೇ ಹಂತದ ಚುನಾವಣೆ ನಾಳೆ ಅಂದರೆ, ಡಿ. 27 ರಂದು ಭಾನುವಾರ ಬೆ. 7.00 ರಿಂದ ಸ. 5.00ರ ವರೆಗೆ 2ನೇ ಹಂತದ ಚುನಾವಣೆ ನಡೆಯಲಿದ್ದು, ಭಾರಿ ಬಿಗಿಬಂದೋಬಸ್ತನ್ನು ಏರ್ಪಡಿಸಲಾಗಿದ್ದು 1135 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ದೇ ಒಡ್ಡಿದ್ದು, 26 ಗ್ರಾಮ ಪಂಚಾಯತಿಯಗಳಲ್ಲಿ 511 ಸದಸ್ಯರ ಆಯ್ಕೆ ನಡೆಯಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಗವಸ, ಸ್ಯಾನಿಟೈಸರ್ ಹಾಕಿ ಮತಗಟ್ಟೆಗಳಲ್ಲಿ ಮತದಾರರನ್ನ ಆಶಾ ಕಾರ್ಯಕರ್ತೆಯವರು ಪರೀಕ್ಷಿಸಿ ಮತ ಹಾಕಲು ಅವಕಾಶ ಮಾಡಿಕೊಡುವರು ದಿ. 30 ರಂದು ಕಪ್ಪಲಕುಂಟೆ ರಸ್ತೆಯಲ್ಲಿರುವ ಡಿ.ನ್ಯಾಕ್ ಶ್ರೇಣೀಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಳ ಎಣಿಕೆ ಬೆ. 8.00 ರಿಂದ ಪ್ರಾರಂಭವಾಗಿ ಮ. 3.00 ಗಂಟೆಯ ವರೆಗೆ ಫಲಿತಾಂಶ ನೀರಿಕ್ಷಿಸಬಹುದಾಗಿದೆ. ದಿ. 29 ರಂದು ಸಾ. 6.00 ಗಂಟೆಯಿಂದ ದಿ. 30ರ ಸಾ. 6.00 ಗಂಟೆಯವರೆಗೆ ಮತ ಏಣಿಕೆ ಕೇಂದ್ರದಲ್ಲಿ ಮಾತ್ರ 144ನೇ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಚುನಾವಣ ಅಧಿಕಾರಿಗಳು, ಸಂಡೂರಿನ ತಹಶೀಲ್ದಾರರಾದ ಎಚ್.ಜಿ. ರಶ್ಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.