ಬೀಗರ ಮನೆಯಾದ ಬೀರಳ್ಳಿ ಗ್ರಾಮ ಪಂಚಾಯಿತಿ

ಸಿರುಗುಪ್ಪ:ನ.21- ತಾಲೂಕಿನ ಬೀರಳ್ಳಿ ಗ್ರಾಮಕ್ಕೆ ಮದುವೆಗೆ ಬಂದ ಬೀಗರು ಉಳಿದುಕೊಳ್ಳಲು ಗ್ರಾಮ ಪಂಚಾಯಿತಿಯನ್ನೇ ಪಿಡಿಒ ಬಿಟ್ಟುಕೊಟ್ಟ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಬೀರಳ್ಳಿ ಗ್ರಾಮದ ಹನುಮಂತ ಎನ್ನುವವರ ಮದುವೆ ಗುರುವಾರ ನಡೆದಿದ್ದು, ಬುಧವಾರ ರಾತ್ರಿ ಹೆಣ್ಣಿನ ಕಡೆಯವರು ಉಳಿದುಕೊಳ್ಳಲು ಗಂಡಿನ ಕಡೆಯವರು ಗ್ರಾಮದ ಗ್ರಾ.ಪಂಚಾಯಿತಿ ಕಚೇರಿಯಲ್ಲಿಯೇ ವ್ಯವಸ್ಥೆಮಾಡಿದ್ದರು.
ಹೆಣ್ಣಿನ ಕಡೆಯವರು ಉಳಿದುಕೊಳ್ಳಲು ಗ್ರಾ.ಪಂ.ಕಚೇರಿಯನ್ನು ನೀಡುವಂತೆ ಪಿಡಿಒ ಮಾನಪ್ಪನವರಿಗೆ ಪೊಲೀಸ್ ಅಧಿಕಾರಿಯೊಬ್ಬರ ಪ್ರಭಾವವಿರುದನ್ನು ಗ್ರಾಮಸ್ಥರು ಖಂಡಿಸಿದ್ದಾರೆ.
ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳ ಸರ್ವತೋಮುಖ ಅಭಿವೃದ್ದಿಗೆ ಗ್ರಾ.ಪಂಚಾಯಿತಿಯು ಕೇಂದ್ರಬಿಂದುವಾಗಿದ್ದು, ಅಂತಹ ಸ್ಥಳವನ್ನು ಕೆಲವರು ತಮ್ಮ ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡಿರುವುದನ್ನು ವಿರೋಧಿಸಿ ತಮ್ಮ ಅಸಮದಾನವನ್ನು ವ್ಯಕ್ತಪಡಿಸಿದ್ದಾರೆ.