ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿ ಪರಿಹಾರ ಸಿಗದ ಹಿನ್ನೆಲೆ ಜಾಗ ಕಳೆದುಕೊಂಡವರಿಗೆ ಬೇಲಿ ಹಾಕಿ ಪ್ರತಿಭಟನೆ

ಬಂಟ್ವಾಳ, ಜು.೨೩- ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗಾಗಿ ನಮ್ಮ ಭೂಮಿ ಪಡೆದು ಪರಿಹಾರ ನೀಡಿಲ್ಲ ಆರೋಪಿಸಿ ಸಂತ್ರಸ್ತರು ತಮ್ಮ ಭೂಮಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಭೂಮಿ ಕಳೆದುಕೊಂಡ ಸಂತ್ರಸ್ತರು ಬಂಟ್ವಾಳದ ನಾವೂರು ಗ್ರಾಮದ ಹಳೆಗೇಟಿನಲ್ಲಿ ಸೇರಿದ್ದು, ಸದಾನಂದ ನಾವೂರು ಅವರ ಜಾಗಕ್ಕೆ ಬೇಲಿ ಹಾಕಿ ಪ್ರತಿಭಟನೆ
ಆರಂಭಿಸಿದ್ದಾರೆ. ನಮಗೆ ಪರಿಹಾರ ಮೊತ್ತದ ಪತ್ರ ಮಾತ್ರ ಬಂದಿದ್ದು, ಇನ್ನೂ ಕೂಡ ಪರಿಹಾರ ಸಿಕ್ಕಿಲ್ಲ ಎಂಬುದು ಅವರ ಆರೋಪವಾಗಿದೆ.