ಬಿ. ಶಿವಕುಮಾರ್‌ರಿಗೆ” ಕನ್ನಡ ಪಯಸ್ವಿನಿ ಪ್ರಶಸ್ತಿ

ಕೋಲಾರ,ಮಾ. ೭- ಕೋಲಾರದ ಸಂಘಟಕ ಕವಿ ಶಿಕ್ಷಕ ಸಮಾಜ ಸೇವಕರಾದ ಬಿ. ಶಿವಕುಮಾರ್ ರವರಿಗೆ ” ಕನ್ನಡ ಪಯಸ್ವಿನಿ ಪ್ರಶಸ್ತಿ -೨೦೨೪” ಕ್ಕೆ ಆಯ್ಕೆಯಾಗಿದ್ದಾರೆ,
ಕೋಲಾರ ಜಿಲ್ಲೆಯ ಮೂಲತಃ ಕೆ ಜಿ ಎಫ್ ನ ಸಂಘಟಕ ಕವಿ ಶಿಕ್ಷಕ ಹಾಗೂ ಸಮಾಜ ಸೇವಕರಾದ ಬಿ. ಶಿವಕುಮಾರ್ ಕೋಲಾರ ರವರಿಗೆ ಕನ್ನಡ ಭವನ ಮತ್ತು ಗ್ರಂಥಾಲಯ -ಕನ್ನಡ ಭವನ ಪ್ರಕಾಶನ , ಕಾಸರಗೋಡು ಹಾಗೂ ಕಥಾ ಬಿಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಮಂಗಳೂರು ವತಿಯಿಂದ ಮಾ ೧೦ ಭಾನುವಾರ ಕಾಸರಗೋಡು ಮುಳ್ಳಿಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಹಮ್ಮಿಕ್ಕೊಂಡಿರುವ “ಕೇರಳ – ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ – ೨೦೨೪ ” ಕಾರ್ಯಕ್ರಮದಲ್ಲಿ ಬಿ. ಶಿವಕುಮಾರ್ ರವರ ಕನ್ನಡ ಸೇವೆ, ಗಡಿ ಭಾಗದ ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವುದು ಹಾಗೂ ನಿರಂತರವಾಗಿ ಗಡಿ ಭಾಗದಲ್ಲಿ ಕನ್ನಡ ನಾಡು ನುಡಿಗಾಗಿ ಗಡಿ ಉತ್ಸವ ಮತ್ತು ಸಲ್ಲಿಸಿರುವ ಸಮಾಜ ಸೇವೆ, ಸಂಘಟನೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡದ ಕಾರ್ಯಕ್ರಮಗಳು, ಕನ್ನಡ ಸೇವೆಯನ್ನು ಪರಿಗಣಿಸಿ ಕಾಸರಗೋಡು ಕನ್ನಡ ಭವನದ ರಾಜ್ಯಂತರ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ – ೨೦೨೪ ” ನೀಡಿ ಗೌರವಿಸಲಾಗುತ್ತದೆ,
ಕಾರ್ಯಕ್ರಮದಲ್ಲಿ ಎಂ .ಕೆ ಪ್ರಾಣೇಶ್ , ಉಪ ಸಭಾಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ ಕರ್ನಾಟಕ ಸರ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಧರ್ಮದರ್ಶಿ ಡಾ|| ಹರೀಕೃಷ್ಣ ಪುನರೂರು ಮಾಜಿ ರಾಜ್ಯಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ.
ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಪಿ .ವಿ. ಪ್ರದೀಪ್ ಕುಮಾರ್ ಅಧ್ಯಕ್ಷರು ಕಥಾ ಬಿಂದು ಪ್ರಕಾಶನ , ಎ .ಆರ್ ಸುಬ್ಬಯ್ಯ ಕಟ್ಟೆ ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ ಕೇರಳ ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ