ಬಿ.ವೈ.ವಿ ಸಂತೋಷ ಲಾಡ್ ಕ್ಷಮೆಯಾಚಿಸದಿದ್ದರೆ ಬೀದಿಗಿಳಿದು ಹೋರಾಟ

ಬೀದರ್:ಏ.24: ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ ವಿಜಯಂದ್ರ ಅವರು ಮರಾಠಾ ಸಮುದಾಯದಿಂದ ರಾಜ್ಯದ ಐಕೈಕ ಮಂತ್ರಿಗಳಾದ ಸಂತೋಷ ಲಾಡ್ ಅವರ ಬಗ್ಗೆ ಅಸಭ್ಯ ಪದ ನಾಲಾಯಕ್ ಎಂಬ ಭಾಷೆ ಬಳಿಕೆ ಮಾಡಿದಕ್ಕೆ ಮರಾಠಾ ಸಮಾಜ ತಿವೃವಾಗಿ ಖಂಡಿಸುತ್ತದೆ ಎಂದು ಸಮಾಜದ ಮುಖಂಡರಾದ ನಾರಾಯಣ ಗಣೇಶ ಹೇಳಿದರು.
ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಸಂತೋಷ ಲಾಡ್ ಅವರು ಅವರು, ನಮ್ಮ ಸಮಾಜದ ಏಕೈಕ ಮಂತ್ರಿಗಳಾಗಿದ್ದಾರೆ. ಅವರ ಬಗ್ಗೆ ಇಂತಹ ಕೀಳು ಪದ ಬಳಿಕೆ ಮಾಡಿರುವ ಬಿ.ವೈ ವಿಜಯಂದ್ರ ಅವರು ಒಂದು ವಾರದೊಳಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇಡೀ ರಾಜ್ಯದ ಮರಠಾ ಸಮಾಜ ಬೀದಿಗಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಬಿಜೆಪಿಯವರು ಈ ಹಿಂದೆ ಸಹ ನಮ್ಮ ಸಮಾಜಕ್ಕೆ ಕಡಿಗಣಿಸಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜದಿಂದ ಒಬ್ಬರಿಗೂ ಟಿಕೇಟ್ ನೀಡಲಿಲ್ಲ. ಕಾಂಗ್ರೆಸ್ ಪಕ್ಷದವರು ಉತ್ತರ ಕನ್ನಡ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜದ ನಾಯಕಿ ಅಚಿಜಲಿ ನಿಂಬಾಳ್ಕರ್ ಅವರಿಗೆ ಟಿಕೇಟ್ ನೀಡಿ ನಮ್ಮ ಮಾನ ಉಳಿಸಿದೆ. ಅದರೆ, ಬಿಜೆಪಿಗರು ಪ್ರತಿ ಬಾರಿ ನಮ್ಮ ಸಮಾಜದಿಂದ ಮತ ಪಡೆದು ನಮಗೆ ಯಾವುದೇ ಸೌಲತ್ತು ನೀಡಲಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಬೀದರ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಕೇಳಲಾಗಿತ್ತಾದರೂ ಮತ್ತೆ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಅನ್ಯಾಯ ಮಾಡಿದ್ದರಿಂದ ನಮ್ಮ ಸಮಾಜದಿಂದ ಸ್ವತಂತ್ರವಾಗಿ ಸ್ಪರ್ಧಿಸಿರುವ ಡಾ.ದಿನಕರ್ ಮೋರೆ ಅವರಿಗೆ ಎಲ್ಲ ಸಮಾಜಗಳು ಬೆಂಬಲ ನೀಡುವಂತೆ ಅವರು ಮನವಿ ಮಾಡಿದರು.
ಸಮಾಜದ ಮುಖಂಡರಾದ ಬಾಲಾಜಿ ಬಿರಾದಾರ, ಅಮರ ಜಾಧವ, ಅನಿಲ ಕಾಳೆ, ವೆಂಕಟ ಬಿರಾದಾರ, ಗೋರಖ ಶ್ರೀಮಾಳೆ ಪತ್ರಿಕಾ ಗೋಷ್ಟಿಯಲ್ಲಿದ್ದರು.