
ಮಾನ್ವಿ.ನ.೧೬- ಬಿವಿಆರ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಿ.ವೀರರೆಡ್ಡಿ ಹಾಗೂ ಬಿ.ಜಯಮ್ಮರವರ ಪುತ್ಥಳಿ ಆನಾವರಣ ಹಾಗೂ ಹೆತ್ತವರ ಹೆಜ್ಜೆಗುರುತು ಧ್ವನಿ ಸುರಳಿಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರಮೇಶಬಾಬು ಯಾಳಗಿ ರಚಿಸಿರುವ ಹೆತ್ತವರ ಹೆಜ್ಜೆಗುರುತು ಧ್ವನಿ ಸುರಳಿಯನ್ನು ಬಿಡುಗಡೆ ಗೊಳಿಸಿ ಕಲ್ಮಠದ ಶ್ರೀ ವಿರೂಪಾಕ್ಷಾ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಬಿಡುಗಡೆ ಮಾಡಿದರು.
ನಂತರ ಮಾತಾನಾಡಿದ ಅವರು ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿ.ವೀರರೆಡ್ಡಿ ಹಾಗೂ ಬಿ.ಜಯಮ್ಮ ದಂಪತಿಗಳು ನಿಸ್ವಾರ್ಥವಾಗಿ ಒಬ್ಬ ವ್ಯಕ್ತಿ ಸಮರ್ಥವಾಗಿ ಬೆಳೆಯಲು ಶಿಕ್ಷಣ ಅಗತ್ಯ ಎಂದು ತಿಳಿದು ಮಾನ್ವಿಯಲ್ಲಿ ಬಿ.ವಿ.ರೆಡ್ಡಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ವಿದ್ಯಾದಾನವನ್ನು ಮಾಡಿ ಸಮಾಜಕ್ಕೆ ಪೂರಕವಾಗಿರುವ ಸಮರ್ಥವಾದ ವ್ಯಕ್ತಿಗಳನ್ನು ತಮ್ಮ ಸಂಸ್ಥೆಯ ಮೂಲಕ ರೂಪಿಸಿದ್ದಾರೆ.
ಅವರ ಅದರ್ಶದಂತೆ ಅವರ ಪುತ್ರರಾದ ಬಿ.ವಿ.ರೆಡ್ಡಿ ಹಾಗೂ ಪದ್ಮಾವತಿ ದಂಪತಿಗಳು ಕೂಡ ಸಂಸ್ಥೆಯನ್ನು ಉತ್ತಮವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ವಿ.ರೆಡ್ಡಿ ಮಾತನಾಡಿ ನಮ್ಮ ತಂದೆ ಬಿ.ವೀರರೆಡ್ಡಿಯವರು ಸಮಾಜಮುಖಿ ಚಿಂತನೆಯುಳ ವ್ಯಕ್ತಿಯಾಗಿದ್ದಾರು ಅವರ ಅಶಾಯದಂತೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ ಹಾಗೂ ಅವರ ಜೀವನ ಇತರರಿಗೆ ಸ್ಪೂರ್ತಿ ನೀಡಲಿ ಎನ್ನುವ ಉದ್ದೇಶದಿಂದ ಅವರ ಪುತ್ಥಳಿಗಳನ್ನು ಶಾಲೆಯ ಆವರಣದಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ನರಸಮ್ಮ, ಸರಸ್ವತಮ್ಮ, ಬಿ.ಕೃಷ್ಣಾರೆಡ್ಡಿ, ಬಿ. ಪದ್ಮಾವತಿ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ಧ್ವನಿಸುರಳಿಯ ಸಾಹಿತಿಗಳಾದ ರಮೇಶಬಾಬು ಯಾಳಗಿ, ಗಾಯಕರಾದ ದೊಡ್ಡಬಸಯ್ಯ ಗವಾಯಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.