ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೬; ರಾಜ್ಯ ಕುಸ್ತಿಯ ಅಕಾಡೆಮಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ನಗರಸಭೆ ಅಧ್ಯಕ್ಷರು.ನಾಯಕಸಮಾಜದ ಜಿಲ್ಲಾಧ್ಯಕ್ಷರಾದ ಬಿ ವೀರಣ್ಣ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನದ ವತಿಯಿಂದ ನಾಯಕ ಸಮಾಜದ ವಿದ್ಯಾರ್ಥಿನಿಲಯದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ.ಮಾತನಾಡಿದ ಅವರು ದೇಶಿಯಾ ಕ್ರೀಡೆಯಾದ ಕುಸ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಕುಸ್ತಿ ಪಟುಗಳಿಗೆ ಹೆಚ್ಚೆಚ್ವು ಅವಕಾಶಗಳು ಸಿಗುವಂತಾಗಲಿ.ಅವರಿಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಮನವಿಮಾಡಿದರು.ಈ ಸಂಧರ್ಭದಲ್ಲಿ ಸಂಸ್ಥೆ ಅಧ್ಯಕ್ಷರಾದ ಡಾ.ಕೆ.ಎಸ್.ಗಂಗಾಧರ, ಎನ್. ಎಂ ಆಂಜನೇಯ ಗುರೂಜಿ ವಕೀಲರು, ಎಚ್ ಜಯಣ್ಣ, ಹಾಲೇಶ್ ಕಾಯಿ ಪೇಟೆ, ಬಿ ವಿ ರಾಜಶೇಖರ, ಶಶಿಕುಮಾರ್, ಎಸ್ಎಂ ಚರಂತಿಮಠ ಉಪಸ್ಥಿತರಿದ್ದರು