ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಕೋವಿಡ್-19 ಮುನ್ನೇಚ್ಚರಿಕೆ

ಬೀದರ:ನ.17: ನಗರದ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕದ ಘನ ಸರ್ಕಾರದ ಆದೇಶ ಪ್ರಕಾರ ಕೊವೀಡ್-19ರ ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಶಿಕ್ಷಣ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರಮಾಣಿತ ಕಾರ್ಯಚರಣಾ ವಿಧಾನ ಮಾರ್ಗಸೂಚಿಯಂತೆ ಮಹಾವಿದ್ಯಾಲಯದಲ್ಲಿ ತರಗತಿ ಕೊಠಡಿಗಳು ಹಾಗೂ ಕಛೇರಿ ಸ್ಯಾನಿಟೈಜರ್ ಮಾಡಲಾಯಿತು.
ಇಂದು ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುವುದರ ಬಗ್ಗೆ ಹಾಗೂ ಮನೆಯಿಂದ ಮಹಾವಿದ್ಯಾಲಯದಕ್ಕೆ ಬರುವಾಗ ಬಸ್ಸಿನಲ್ಲಿ, ದಾರಿಯೋಳಗೆ ಹಾಗೂ ತರಗತಿಯಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸುವುದು, ದೈಹಿಕ ಅಂತರ ಕಾಯಿದುಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು, ಮನೆಯಿಂದಲೇ ತಮ್ಮ ತಮ್ಮ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡು ಬರುವುದು ಅನಿವಾರ್ಯವೆಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ: ಎಸ್.ಕೆ. ಸಾತನೂರ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ: ಎಸ್.ಬಿ. ಗಾಮಾ, ಕೋವಿಡ್-19 ಟಾಸ್ಕ ಫೋರ್ಸ ಸಮಿತಿಯ ಅಧ್ಯಕ್ಷರುಗಳಾದ ಮೇಜರ್ ಡಾ: ಪಿ.ವಿಠ್ಠಲ ರಡ್ಡಿ ಹಾಗೂ 5ನೇ ಸೆಮಿಸ್ಟರನ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರೆಂದು ಡಾ: ಎಚ್.ಬಿ. ಸೇಡಂಕರ ಸಿಬ್ಬಂದಿ ಕಾರ್ಯದರ್ಶಿಗಳು ತಿಳಿಸಿದರು.