ಬೀದರ್: ಜೂ.21: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬಿ.ವಿ.ಬಿ. ಪದವಿ ಪೂರ್ವ ಮಹಾವಿದ್ಯಾಲಯ, ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಶರಣಬಸವೇಶ್ವರ ಅಭ್ಯಾಸಾರ್ಥ ಪ್ರೌಢಶಾಲೆ ಹಾಗೂ ಪತÀಂಜಲಿ ಯೋಗ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಅಂರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪತÀಂಜಲಿ ಯೋಗ ಕೇಂದ್ರದ ಯೋಗ ಗುರುಗಳಾದ ಶ್ರೀ ಯೊಗೇಂದ್ರ ಯದ್ಲಾಪೂರೆÉ ಹಾಗೂ ಬಿ.ವಿ.ಬಿ. ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಡಾ. ಕಾವೇರಿ ಪಾಪಡೆಯವರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಮಹಾವಿದ್ಯಾಲಯದ ಆವರಣದಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗದಿನವನ್ನು ಯಶ್ವಸಿಗೊಳಿಸಿದರು.
ಕಾರ್ಯಕ್ರಮ ಆರಂಭದಲ್ಲಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿ, ಅಂತರಾಷ್ಟ್ರೀಯ ಯೋಗದಿನದ ಈ ವರ್ಷದ ಧೇಯವಾದ “ವಿಶ್ವ ಕುಟುಂಬಕ್ಕಾಗಿ ಯೋಗ” ಯೋಗದಿಂದ ಆರೋಗ್ಯ ಕಾಪಾಡಿಕೊಂಡು ನಿರೋಗಿಯಾಗಿ ಬಾಳಲು ಸಾಧ್ಯ, ಯೋಗ ನಮ್ಮನ್ನು ಚೈತನ್ಯದಿಂದ ಜೀವನ ನಡೆಸಲು ಸಹಾಯಕವಾಗಿದೆ ಅಲ್ಲದೇ ದೀರ್ಘಾಯುಗಳಾಗಿ ಮಾಡಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ದೀಪಾ ರಾಗ, ಎನ್.ಸಿ.ಸಿ ಅಧಿಕಾರಿಗಳಾದ ಶ್ರೀ ಮಾರುತಿ ಭೀಮಣ್ಣಾ, ಸಾಂಸ್ಕøತಿ ವಿಭಾಗದ ಸಂಚಾಲಕರಾದ ಶ್ರೀಮತಿ ರೇಣುಕಾ ಎಂ.ಸ್ವಾಮಿ, ಯುವರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಹಣಮಂತಪ್ಪ ಬಿ.ಸೇಡಂಕರ ಹಾಗೂ ಮಹಾವಿದ್ಯಾಲಯ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.