ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಎನ್.ಡಿ.ಆರ್.ಎಫ್ ವತಿಯಿಂದÀ ಪ್ರಾತ್ಯಾಕ್ಷೀಕತೆ ಕಾರ್ಯಕ್ರಮ

ಬೀದರ, ಜೂ.18: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೀದರ, ಅಗ್ನಿಶಾಮಕ ದಳ ಮತ್ತು ಎನ್.ಡಿ.ಆರ್.ಎಫ್.ನ 10ನೇ ಬಟಾಲಿಯನ್ ವಿಜಯವಾಡಾ ತಂಡದವರ ಸಂಯುಕ್ತಾಶ್ರಯದಲ್ಲಿ ಅಪಘಾತ, ಅತಿವೃಷ್ಠಿ, ಭೂಕಂಪ ಸಂದರ್ಭದಲ್ಲಿ ಗಾಯಾಳುಗಳನ್ನು ಯಾವ ರೀತಿಯಾಗಿ ಪ್ರಥಮ ಚಿಕಿತ್ಸೆ ಮಾಡಬೇಕು ತುರ್ತು ಸಂದರ್ಭದಲ್ಲಿ ಕೈಗೆ ಸಿಕ್ಕಂತಹÀ ಸ್ಥಳೀಯ ವಸ್ತುಗಳಿಂದ ನೆರೆಪೀಡಿತರಿಗೆ ಹೇಗೆ ರಕ್ಷಣೆಯನ್ನು ನೀಡಬೇಕು. ಸಿ.ಪಿ.ಆರ್. ಕೃತಕ ಉಸಿರಾಟ ನೀಡುವ ಕುರಿತಾಗಿ ವಿದ್ಯಾರ್ಥಿಗಳಿಗೆ ಪ್ರಾತ್ಯಾಕ್ಷೀಕೆಯನ್ನು ಮಾಡಿ ತೋರಿಸುವುದರ ಮೂಲಕ ಅರಿವು ಮೂಡಿಸಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡಿ ತುರ್ತು ಸಂದರ್ಭದಲ್ಲಿ ಎನ್.ಡಿ.ಆರ್.ಎಫ್. ಕಾರ್ಯ ಶ್ಲಾಘನೀಯ ಅವರು ಜೀವ ರಕ್ಷಿಸುವುದರೊಂದಿಗೆ ಜೀವ ರಕ್ಷಣೆಯ ಅರಿವನ್ನು ಮೂಡಿಸುತ್ತಾರೆ ಪ್ರಕೃತಿ ವಿಕೋಪದ ಸಮಯದಲ್ಲಿ ಪ್ರತಿ ನಾಗರೀಕರು ಧೈರ್ಯದಿಂದ ಅವರೊಂದಿಗೆ ಕೈಜೋಡಿಸಬೇಕು ಹಾಗೂ ಈ ರೀತಿಯ ತರಬೇತಿಗಳು ನಿರಂತರವಾಗಿ ನಡೆಯಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ಶ್ರೀ ಸಂದೀಪ ಪಾಟೀಲ ಜಿಲ್ಲಾ ಸಂಯೋಜನಾಧಿಕಾರಿಗಳು ಡಿಸಾಸ್ಟರ್ ಮಾನ್ಯೇಜಮೆಂಟ್, ಶ್ರೀ ಪ್ರದೀಪಕುಮಾರ, ಎನ್.ಡಿ.ಆರ್.ಎಫ್ ನಿರೀಕ್ಷಕರು, ಶ್ರೀ ಮುಜಮೀಲ್ ಅಗ್ನಿಶಾಮಕ ದಳ ಅಧಿಕಾರಿಗಳು, ಶ್ರೀ ಪ್ರೇಮಸಾಗರ ದಾಂಡೆಕರ್, ಶ್ರೀ ಚಂದ್ರಶೆಖರ ಗಂಗಶೆಟ್ಟಿ, ಪ್ರಭಾರಿ ಉಪನಿರ್ದೇಶಕರು, ಡಾ. ದೀಪಾ ರಾಗ, ಪ್ರಾಂಶುಪಾಲರು ಬಿ.ವಿ.ಬಿ. ಪದವಿ ಪೂರ್ವ ಕಾಲೇಜು, ಶ್ರೀ ಶಿವರಾಜ ಜಿ. ಮಠ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಸಂತೋಷಕುಮಾರ ರಾಯಿಕೋಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ನರಸಪ್ಪಾ ತಹಸೀಲದಾರರು ಪ್ರಾಸ್ತಾವಿಕವಾಗಿ ಮಾತನಾಡಿದರೆ, ಯುವ ರೆಡ್ಡಕ್ರಾಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಹಣಮಂತಪ್ಪ ಬಿ. ಸೇಡಂಕರ ನಿರೂಪಿಸಿದರೆ, ಇತಿಹಾಸ ವಿಭಾಗದ ಶ್ರೀ ಬಸವರಾಜ ಬಿರಾದಾರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾದ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.