ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಬೀದರ : ಮಾ.5: ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಸರ್. ಡಾ. ಸಿ.ವಿ. ರಾಮನ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಗೂ ಸಸಿಗೆ ನೀರು ಎರೆಯುವದರ ಮೂಲಕ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಡಾ. ಪಿ. ವಿಠ್ಠಲ ರಡ್ಡಿಯವರು ಉದ್ಘಾಟಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಅಂಬಿಕಾದೇವಿಯವರು ಮಾತನಾಡುತ್ತಾಇಂದು ವಿಜ್ಞಾನವಿಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಸರ್. ಸಿ.ವಿ. ರಾಮನ್‍ರವರು ವಿಜ್ಞಾನ ಕ್ಷೇತ್ರದಲ್ಲಿ ನೊಬಲ್ ಪ್ರಶಸ್ತಿ
ಪಡೆದಭಾರತದ ಪ್ರಥಮ ವಿಜ್ಞಾನಿಯಾಗಿದ್ದಾರೆ. 1930ರ ವರ್ಷವು ಭೌತಶಾಸ್ತ್ರವಿಷಯದ ಬಗ್ಗೆ. ಸುವರ್ಣಾಕ್ಷರಗಳಲ್ಲಿ ಬರೆದಿಡುವವರ್ಷವಾಗಿದೆ. ರಾಮನ್ ಪರಿಣಾಮವು ಹೇಗೆ ಅವಿಷ್ಕರಿಸಲು ಸಾಧ್ಯವಾಯಿತು ಅದರ ಹಿಂದೆ ಇರುವ ಸಿ.ವಿ. ರಾಮನರ ಪರಿಶ್ರಮದ ಬಗ್ಗೆ ಮಾಹಿತಿ ನೀಡುತ್ತಾ ಇಂದಿನ ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಹೊಸ ಹೊಸ ಅವಿಷ್ಕಾರಗಳು ಮಾಡಿ ದೇಶದ ಹೆಸರನ್ನು ವಿಶ್ವದಲ್ಲಿ ಎತ್ತಿಹಿಡಿಯಬೇಕೆಂದು ನುಡಿದರು.
ಕಾರ್ಯಕ್ರಮದ ಇನ್ನೋರ್ವ ವಿಶೇಷ ಅತಿಥಿ ಉಪನ್ಯಾಸಕರಾದ ಶ್ರೀ. ಪ್ರವೀಣಕುಮಾರ ಪುರೋಹಿತ್ ಅವರು ತಮ್ಮ ಉಪನ್ಯಾಸದಲ್ಲಿ ಸಿ.ವಿ ರಾಮನ್ ಅವರ ಸಂಶೋಧನಾ ಪ್ರಕಾಶನಗಳು ಅವರ ಸಾಧನೆಯ ಅಚಲ ವಿಶ್ವಾಸ ದ ಮಾಹಿತಿ ನೀಡುತ್ತಾ ರಾಮನ್ ಅವರು ತಮ್ಮ ಆಕರ್ಷಕ ವ್ಯಕ್ತಿತ್ವ ಹಾಗೂ ಪ್ರಾಮಾಣಿಕರಿಗೆ ನೀಡುವ ಅದ್ಯತೆಯಿಂದಲೇ ಇನ್ನೋರ್ವ ನೋಬೆಲ್ ಪ್ರಶಸ್ತಿ ಪಡೆದ ಚಂದ್ರಶೇಖರ ಅವರನ್ನು ಕಾಣಲು ಸಾಧ್ಯವಾಯಿತು ಈ ಮಾತನ್ನು ಸ್ವತಃ ಚಂದ್ರಶೇಖರ ಅವರೇ ತಮ್ಮ ಕೃತಿ (Seveಟಿ ಖuಠಿees ಅhಚಿಟಿgeಜ ಒಥಿ ಐiಜಿe) ಬರೆದುಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಆಣದೂರೆಯವರು ಮಾತನಾಡುತ್ತಾ, ರಾಮನ್ ಪರಿಣಾಮ ಹಾಗೂ ಸ್ವದೇಶಿ ವಿಜ್ಞಾನದ ಬೆಳವಣಿಗೆಗೆ ಅವುರು ನೀಡಿದ ಆದ್ಯತೆಯ ಬಗ್ಗೆ ಹೇಳಿದರು
ಇನ್ನೋರ್ವ ಅತಿಥಿಗಳಾದ ಡಾ. ವಿನಾಯಕ ಕೊತ್ತಂಬರಿ ಅವರು ಸೂರ್ಯನ ಸುತ್ತಾ 9 ಗ್ರಹಗಳಿರುವುದು ಅವುಗಳ ಚಲನ ವಲನ ಹಾಗೂ ಸೊನ್ನೆ ಕಂಡುಹಿಡಿದಿದ್ದು ಭಾರತೀಯರು ಮಾತ್ರ ಇಂದಿನ ದಿನಗಳಲ್ಲಿ ಇನ್ನೂ ವಿಜ್ಞಾನಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ಮಾಡಿ ವಿದ್ಯಾರ್ಥಿಗಳು ರಾಷ್ಟ್ರದ ಕೀರ್ತಿ ಹೆಚ್ಚಿಸಬೇಕೆಂದು ನುಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಇಂದಿನ ವಿಜ್ಞಾನ ದಿನಾಚರಣೆಯ ಘೋಷ ವಾಕ್ಯ “ವಿಕಸಿತ ಭಾರತಕ್ಕಾಗಿ ಸ್ವದೇಶಿ ತಂತ್ರಜ್ಞಾನ” ಹಾಗೂ ಪ್ರಸ್ತುತ ವಿದ್ಯಾರ್ಥಿಗಳ ಮೂಲ ವಿಜ್ಞಾನದಲ್ಲಿ ಆಸಕ್ತಿವಹಿಸದೆ ಕೇವಲ ಉನ್ನತ ಹುದ್ದೆಗಳಿಗಾಗಿ ಹಾತೋರೆಯುತ್ತಿದ್ದಾರೆ. ಆದರೆ ಮೂಲ ವಿಜ್ಞಾನಿಗಳಾದ ಸರ್. ಸಿ.ವಿ. ರಾಮನ್, ಜಗದೀಶ ಚಂದ್ರಭೋಸ್, ಆರ್ಯಭಟ,ಆರ್ಕಿಮೀಡಿಸ್, ವರಾಹಮಿಹಿರರ ಮುಂತಾದ ಪ್ರಾಚೀನ ವಿಜ್ಞಾನಿಗಳು ಇಡೀ ವಿಶ್ವಕ್ಕೆ ತಮ್ಮ ಕ್ರಾಂತಿಕಾರಿ ಅನ್ವೇಷಣೆ ಮಾಡಿ ಆಧುನಿಕ ಭಾರತೀಯರನ್ನು ಚಕಿತಗೊಳಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅನ್ವೇಷಣೆ ಮಾಡಿ ಎ.ಪಿ.ಜೆ. ಅಬ್ದುಲ್ ಕಲಾಂರಂತೆ ಸಣ್ಣ ಗುರಿ ಅಪರಾಧ ಹಾಗೂ ಉನ್ನತ ಆದರ್ಶಗಳು ಇಟ್ಟುಕೊಂಡಾಗ ಮಾತ್ರ ದೇಶದ ಕೀರ್ತಿ ಹೆಚ್ಚಿಸಲು ಸಾಧ್ಯವೆಂದು ಮಾರ್ಮಿಕವಾಗಿ ನುಡಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿಕ್ವಿಜ್, ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದ. ವೇದಿಕೆ ಮೇಲೆ ಉಪಸ್ಥಿರಿದ್ದ ಅತಿಥಿಗಳನ್ನು ಉಪನ್ಯಾಸಕರಾದ ಶ್ರೀಮತಿ ಶೈಲಜಾ. ಸ್ವಾಗತಿಸಿದರು,
ಕಾರ್ಯಕ್ರಮವನ್ನು ಕು. ಸುಷ್ಮಾ ನಿರೂಪಿಸಿದರೆ, ವಂದನಾರ್ಪಣೆಯನ್ನು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶ್ವೇತಾ ನಾಯಕ ನೇರವೇರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು ಎಂದು ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಕೋಟೆಯವರು ತಿಳಿಸದರು.