
ಬೀದರ:ಮಾ.11: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜ್ಯೋತಿ ಬೆಳಗಿಸುವುದರೊಂದಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ: ಜಯಶ್ರೀ ಪ್ರಭಾ ಅವರು ಮಾತನಾಡುತ್ತಾ ವೇದಗಳ ಕಾಲದಲ್ಲಿ ಮಹಿಳೆಯರು ಬಹಳ ಶೋಚನಿಯ ಪರಿಸ್ಥಿಯಲ್ಲಿದ್ದರು ಮನುಹೇಳುವಂತೆ ಸ್ತ್ರೀಯರಿಗೆ ಸ್ವತಂತ್ರ್ಯವಿಲ್ಲ ಅವರು ಯಾವುದೇ ಶಿಕ್ಷಣ ಪಡೆಯದಂತೆ ಕೇವಲ ನಾಲ್ಕು ಗೋಡಗಳಲ್ಲಿ ಅಡುಗೆ ಕೆಲಸಕ್ಕೆ ಮಾತ್ರ ಸೀಮಿತವಾಗಿತ್ತು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೇದಗಳ ಕಾಲದಲ್ಲಿ ಶಿಕ್ಷಣ ಪಡೆದ ಖ್ಯಾತ ಮಹಿಳಾ ಪಂಡಿತರೆಂದರೆ ಅಪಲಾ, ವಿಶ್ವವರಾ ಹೀಗೆ ಮುಂತಾದ ಮಹಿಳೆಯರು ಶಿಕ್ಷಣ ಪಡೆದು ತಾವು ಸಹ ಸಮಾಜಕ್ಕೆ ಶಿಕ್ಷಣವಂತರಾಗಲು ಪ್ರೊತ್ಸಾಹಿಸಿದರು. ಆಗಿನ ಕಾಲದ ಕರ್ನಾಟಕದ ಧೀರ ಮಹಿಳೆರೆಂದರೆ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕೆಳದಿ ಚೆನ್ನಮ್ಮಾ, ಝಾನ್ಸಿರಾಣಿ ಲಕ್ಷ್ಮೀಬಾಯಿ ಇಂತಹ ವೀರ ಮಹಿಳೆಯರು ಸ್ವಾತಂತ್ರ್ಯಕ್ಕಾಗಿ ಬ್ರಿಟಷರ ನಿದ್ದೆಗೆಡಿಸಿದಂತಹವರು. ಇಂದು ಭೂಮಿಯಿಂದ ಆಕಾಶದಲ್ಲಿ ಯುದ್ಧವಿಮಾನವನ್ನು ನಡೆಸುವ ಛಲವನ್ನು ಹೊಂದಿದ್ದಾರೆ ಇವರ ಆದರ್ಶ ಇಟ್ಟುಕೊಂಡು ನೀವು ಸಹ ದೇಶಕ್ಕೆ ಮಾದರಿಯಾಗಬೇಕೆಂದು ಯುವತಿಯರನ್ನು ಪ್ರೋತ್ಸಾಹಿಸಿದರು
ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಇಂದಿನ ಜಗತ್ತು ಕೇವಲ ಪುರುಷರಿಂದಷ್ಟೆ ಅಲ್ಲ ಯಾವ ಪುರುಷನ ಹಿಂದೆ ಮಹಿಳೆಯ ಶಕ್ತಿ ಇರುತ್ತದೆಯೋ ಅಂತಹ ವ್ಯಕ್ತಿ ಯಾವುದೇ ತೊಂದರೆಗಳಿಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯವೆಂದು ನುಡಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಶ್ರೀಮತಿ ಸರೋಜನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬ ಶಿಕ್ಷಣ ಪಡೆದಂತೆ, ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ದೇವತಾ:’ ಅಂದರೆ ಎಲ್ಲಿ ನಾರಿಯರ ಪೂಜೆ ನಡೆಯುತ್ತದೆಯೋ ಅಲ್ಲಿ ದೇವತೆಗಳು ವಾಸಮಾಡುತ್ತಾರೆ. ಮನೆ ಮೊದಲ ಪಾಠಶಾಲೆ ತಾಯಿಯೇ ಮೊದಲು ಗುರು, ‘ನಾರಿ ಶಕ್ತಿ ದೇಶ ಕೀ ಶಾನ’ ಇಂದಿನ ಮಾನ್ಯ ಪ್ರಧಾನ ಮಂತ್ರಿಗಳ ‘ಬೇಟಿ ಬಜಾವೊ, ಬೇಟಿ ಪಢಾವೊ’ ಅಭಿಯಾನ ಸೂಕ್ತವಾಗಿದೆ. ಸ್ತ್ರೀಯಲ್ಲಿ ಲಕ್ಷ್ಮಿ, ಸರಸ್ವತಿ, ಮಾತೆ ಸ್ವರೂಪ ನಮ್ಮ ಭಾರತದಲ್ಲಿ ಮಾತ್ರ ಕಾಣುತ್ತೇವೆ. ಇಡೀ ವಿಶ್ವವೇ ಭಾರತಕ್ಕೆ ಪೂಜನೀಯ ಭಾವದಿಂದ ನಮಿಸುತ್ತದೆ ಇಂದಿನ ಅಣು ಪ್ರಪಂಚದಲ್ಲಿ ಶಾಂತಿ ಮಂತ್ರ ಹೇಳಿದ್ದು ಕೇವಲ ಭಾರತ ದೇಶ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮ ಮೊದಲಿಗೆ ಪ್ರಾರ್ಥನೆ ಗೀತೆಯನ್ನು ಕು: ಸಾಕ್ಷಿ ಹಾಡಿದರೆ, ಪ್ರಾಸ್ತವಿಕ ನುಡಿ ಹಾಗೂ ಸ್ವಾಗತವನ್ನು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗರವರು ಮಾಡಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶೈಲಜಾ ಸಿದ್ಧವೀರ ನಡೆಸಿಕೊಟ್ಟರೆ ಕಾರ್ಯಕ್ರಮವನ್ನು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾ ಎಸ್ ವಂದಿಸಿದರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.