
ಬೀದರ:ಎ.13: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಓರಿಯೆಂಟೇಶನ್ ಕಾರ್ಯಕ್ರಮವನ್ನು ಸಸಿಗೆ ನೀರೆರಿಯುವುದರ ಮುಖಾಂತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಹಾಗೂ ಡಾ. ವಿದ್ಯಾ ಪಾಟೀಲ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ವಿದ್ಯಾ ಪಾಟೀಲ ಅವರು ಪರಿಸರದಿಂದ ಇಡೀ ಭೂಮಂಡಲ ರಕ್ಷೀಸಲು ಸಾಧ್ಯ ಘನ ತಾಜ್ಯಗಳನ್ನು ಪುನರ ನವೀಕರಿಸಲು ಪ್ರಜೆಗಳು ಹಾಗೂ ಸರ್ಕಾರದವರು ಕೈಜೋಡಿಸಿದಾಗ ಅದರಿಂದ ಉಪ ಉತ್ಪನಗಳನ್ನು ಸಿದ್ದಮಾಡಿ ಉದಾಹರಣೆ ರೈತರಿಗೆ ಸಾವಯವ ಗೊಬ್ಬರ ಹಾಗೂ ಪ್ಲಾಸ್ಟಿಕ್ ಘನ ತಾಜ್ಯಗಳಿಂದ ಹೊಸ ಉತ್ಪನಗಳನ್ನು ಸಿದ್ದಪಡಿಸಿ ಭೂ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಇಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬ ರೋವರ ರೇಂಜರ ತಮ್ಮ ತಮ್ಮ ಗ್ರಾಮಗಳಲ್ಲಿ ಕಸದಿಂದ ರಸ ತೆಗೆಯುವ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿಗಳಾದ ಭಾರತ ಸ್ವೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕರಾದ ಶ್ರೀಮತಿ ನಾಗರತ್ನ ಪಾಟೀಲ ಮಾತನಾಡುತ್ತಾ ಪ್ರತಿಯೊಬ್ಬರು ರಾಷ್ಟ್ರದ ಬಗ್ಗೆ ಕಾಳಜಿವಹಿಸಲು ಸ್ವಯಂ ಸೇವಕರಾದ ತಾವುಗಳು ಸಸಿ ನಡೆಯುದರ ಜೊತೆಗೆ ಅದು ಮರವಾಗುವತನಕ ಕಾಳಜಿ ವಹಿಸಿಬೇಕು ಉದಾಹರಣೆಗೆ ಸಾಲು ಮರ ತಿಮ್ಮಕ್ಕ ಸಾವಿರ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಬೆಳೆಸಿ ಎಲ್ಲರಿಗೂ ಮಾದರಿಯಾಗಲು ಕರೆ ಕೊಟ್ಟರು.
ಕಾರ್ಯಕ್ರಮದ ವೇದಿಕೆಯ ಗೌರವ ಉಪಸ್ಥಿತಿರಾದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಇರುವುದೊಂದೇ ಭೂಮಿ ಅದನ್ನು ರಕ್ಷೀಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಈ ಸುಂದರ ಭೂಮಿ ಇಲ್ಲಿನ ಜಲಚರಗಳು ಪ್ರತಿಯೊಬ್ಬ ಮಾನವನಿಗೆ ಉಪಯೋಗವಾಗಿವೆ ಹಾಗೂ ಪರಿಸರಕ್ಕೆ ದಕ್ಕೆಯಾಗದಂತೆ ನಾವು ಬದುಕಬೇಕು ಎಂದು ಕರೆಕೊಟ್ಟರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿಯವರು ಮಾತನಾಡುತ್ತಾ ಮಣ್ಣಿನ ಸಂರಕ್ಷಣೆ (Sಚಿve Soiಟ) ಮಾಡಲು ಗಿಡಮರಗಳ ರಕ್ಷಣೆ ಅವಶ್ಯಕವಾಗಿದೆ ಆರಣ್ಯ ನಾಶದಿಂದ ಪರಿಸರದಲ್ಲಿ ಉಷ್ಣಾಂಶ ಹೆಚ್ಚಳದಿಂದ ಸಮುದ್ರಮಟ್ಟ ಹೆಚ್ಚಾಗುತ್ತದ ಜಲಮಾಲಿನ್ಯ ವಾಯುಮಾಲಿನ್ಯದಿಂದಾಗಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದುದರಿಂದ ಎಲ್ಲಾ ಸ್ವಯಂ ಸೇವಕರು ಪರಿಸರ ಬಗ್ಗೆ ಕಾಳಜಿವಹಿಸಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೀತೆಯನ್ನು ಕು: ಮಾಲಾಶ್ರೀ ಬಿ.ಎಸ್ಸಿ.3 ಸೆಮಿಸ್ಟರ್ ಹಾಡಿದರೆ, ಸ್ವಾಗತ ಹಾಗೂ ಪ್ರಾಸ್ತವಿಕ ನುಡಿಯನ್ನು ಇತಿಹಾಸ ವಿಭಾಗದ ಮುಖ್ಯಸ್ಥರಾದ ಶಿವರಾಜ ಜಿ. ಮಠ ನಡೆಸಿಕೊಟ್ಟರೆ, ಕಾರ್ಯಕ್ರಮವನ್ನು ಶ್ರೀ ಬಸವರಾಜ ಬಿರಾದಾರ ಇತಿಹಾಸ ಉಪನ್ಯಾಸಕರು ನಿರ್ವಹಿಸಿದರು, ದೈಹಿಕ ನಿರ್ದೇಶಕರಾದ ಡÁ. ಕಾವೇರಿ ಪಿ. ವಂದಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.