
ಬೀದರ :ಸೆ.10: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ, ಹಾಗೂ ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಆವರಣದ ಶಾಲಾ ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ ವಾಲಿಯವರ ಮಾರ್ಗದರ್ಶದಲ್ಲಿ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಮಾನ್ಯತೆ ಗಳಿಸಲು ಸರ್ವ ರೀತಿಯಲ್ಲೂ ಸಿದ್ಧತೆಯನ್ನು ನಡೆಸಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿ, ಉಪ ಪ್ರಾಂಶುಪಾಲರಾದ ಹಾಗೂ ಐ.ಕ್ಯೂ.ಎ.ಸಿ. ಕೋ-ಆಡಿನೇಟರಾದ ಅನೀಲಕುಮಾರ ಅಣದೂರೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಸಹಕಾರದಿಂದ ಎಲ್ಲಾ ನಿಕಾಯಗಳನ್ನು ಸುಸಜ್ರ್ಜಿತಗೊಳಿಸಿ ವಿದ್ಯಾರ್ಥಿಗಳಿಗೆ ಅನಕೂಲವಾಗುವಂತೆ ನ್ಯಾಕನ್ ಎಲ್ಲಾ ಪ್ರಕ್ರೀಯೆಗಳನ್ನು ಪ್ರಬುದ್ಧವಾಗಿ ನಿರ್ವಹಿಸಿಕೊಂಡು ಬಂದಿದೆ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯು (ನ್ಯಾಕ್) ಮಹಾವಿದ್ಯಾಲಯಕ್ಕೆ ಅಗಷ್ಟ ತಿಂಗಳನಲ್ಲಿ ಭೆಟ್ಟಿ ನೀಡಿ ಮಹಾವಿದ್ಯಾಲಯದ ಶೈಕ್ಷಣಿಕ ಮೌಲ್ಯಾಂಕವನ್ನು ಮಾಡಿ ಮಹಾವಿದ್ಯಾಲಯಕ್ಕೆ ಸಿಜಿಪಿಎ 3.15ದೊಂದಿಗೆ ‘ಎ’ ಶ್ರೇಣಿ ನೀಡಿರುತ್ತಾರೆ.
ಈ ಪ್ರತಿಷ್ಠಿತ ಮಹಾವಿದ್ಯಾಲಯ ಆವರಣದ ಶಾಲಾ, ಕಾಲೇಜುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಾ. ರಜನೀಶ ಎಸ್. ವಾಲಿಯವರನ್ನು ಮಹಾವಿದ್ಯಾಲಯದ ಪ್ರಾಂಶುಪಾಲರು, ಐ.ಕ್ಯೂ.ಎ.ಸಿ. ಕೋಆಡಿನೇಟರ್ ಎನ್.ಎಸ್.ಎಸ್. ಅಧಿಕಾರಿ ಡಾ. ದೀಪಾ ರಾಗ ಹಾಗೂ ಡಾ. ಮಲ್ಲಿಕಾರ್ಜುನ ಕನ್ನಕಟ್ಟೆಯವರು ಸನ್ಮಾನಿಸಿ ಸಿಹಿ ತಿನ್ನಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಅಂಜನಾ ವಾಲಿಯವರು ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಈ ಸಾಧನೆಗೆ ಹೈ.ಕ.ಶಿ. ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿ ಪ್ರಾಂಶುಪಾಲ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ, ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಹಾವಿದ್ಯಾಲಯವು ಇನ್ನೂ ಉನ್ನತ ಶ್ರೇಣಿ ಪಡೆಯಲು ಶ್ರಮಿಸಬೇಕೆಂದು ಶುಭ ಕೋರಿದ್ದಾರೆಂದು ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ಹಣಮಂತಪ್ಪ ಬಿ. ಸೇಡಂಕರ ತಿಳಿಸಿದ್ದಾರೆ.