ರಾಯಚೂರು,ಏ.೨೭-
ಇಂದು ಮುಂಜಾನೆ ೫:೩೦ರ ಸುಮಾರಿಗೆ ಮಾನ್ವಿ ನಗರದಲ್ಲಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಂಸದರಾದ ಬಿ ವಿ ನಾಯಕ ಅವರ ಮನೆಯ ಗೃಹಪ್ರವೇಶ ಹೋಮ-ಹವನ, ಪೂಜೆಯನ್ನು ನೆರವೇರಿಸಿದರು.
ಬಿ ವಿ ನಾಯಕ ಹಾಗೂ ಪತ್ನಿ ಪದ್ಮಾವತಿ ಮತ್ತು ಮಗ ಹಾಗೂ ಸಂಬಂಧಿಗಳು ಭಾಗವಹಿಸಿದ್ದರು ಕ್ಷೇತ್ರದ ಸುಮಾರು ೧೦ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ.
ವಿರೋದ ಪಕ್ಷದ ಹಲವರು ಬಿ ವಿ ನಾಯಕ ಅವರು ಕ್ಷೇತ್ರದಲ್ಲಿರುವುದಿಲ್ಲ ಅವರು ರಾಯಚೂರು ಅಲ್ಲಿ ಇರುತ್ತಾರೆ ಸ್ಥಳೀಯ ಅಭ್ಯರ್ಥಿಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿದ್ದರು, ಆದರೆ ಬಿ ವಿ ನಾಯಕ್ ಅವರು ಕ್ಷೇತ್ರಕ್ಕೆ ಬಂದ ಮೊದಲ ದಿನದಿಂದನೂ ನಾನು ಕ್ಷೇತ್ರದಲ್ಲಿ ವಾಸ ಮಾಡುತ್ತೇನೆ ಕ್ಷೇತ್ರದ ಜನತೆಯ ಜೊತೆಗೆ ಇರುತ್ತೇನೆ ಎಂದು ಹೇಳಿದ ಮಾತಿಗೆ ಇಂದು ಸ್ವಂತ ಮನೆ ಖರೀದಿ ಮಾಡಿ ಗೃಹ ಪ್ರವೇಶ ಮಾಡಲಾಗಿದ್ದು ಹಲವರಿಗೆ ಉತ್ತರ ನೀಡಿದ್ದಂತಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಾಕ್ಸ್
ಕ್ಷೇತ್ರದ ಜನತೆಯ ಆಶೀರ್ವಾದ ಬಿಜೆಪಿ ಪಕ್ಷದ ಮೇಲೆ ಇದೆ, ಬಿ ವಿ ನಾಯಕ್ ಇಲ್ಲೆ ವಾಸ ಮಾಡುತ್ತಾರೆ,ಬಿ ವಿ ನಾಯಕ್ ಅವರನ್ನ ಗೆಲ್ಲಿಸಬೇಕು ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಇತಿಹಾಸ ಸೃಷ್ಟಿ ಮಾಡಬೇಕೆಂದು ಜನ ತೀರ್ಮಾನ ಮಾಡಿದ್ದಾರೆ,
ಈ ಬಾರಿಯ ಚುನಾವಣೆಯಲ್ಲಿ ಪ್ರಚಾರಕ್ಕೆ ಸಿದ್ದರಾಮಯ್ಯ ಅಲ್ಲ ಯಾರು ಬಂದ್ರೂ ಬಿ ವಿ ನಾಯಕ್ ಅವರನ್ನ ಸೋಲಿಸಲು ಆಗುವುದಿಲ್ಲವೆಂದು ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ ತಿಳಿಸಿದರು.