ಬಿ.ವಿ ನಾಯಕರಿಂದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ – ದೇವಣ್ಣ ನಾಯಕ

ರಾಯಚೂರು, ಏ.೨೦- ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ಸರ್ವೋಚ್ಛ ನ್ಯಾಯಲಯದ ನ್ಯಾಯವಾದಿ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡ ಕೆ.ದೇವಣ್ಣ ನಾಯಕ ಬೇಸರ ವ್ಯಕ್ತಪಡಿಸಿದರು.
ಅವರಿಂದು ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಬಿ.ವಿ ನಾಯಕ ಅವರು ಅಧಿಕೃತವಾಗಿ ಬಿಜೆಪಿ ಸೇರಿದ್ದನ್ನು ಕೇಳಿ ದಿಗ್ಭ್ರಮೆ ಹಾಗೂ ಮನಸ್ಸಿಗೆ ನೋವನ್ನುಂಟು ಮಾಡಿತು ಎಂದ ಅವರು, ದಿವಂಗತ ಎ. ವೆಂಕಟೇಶನಾಯಕರು ಸಭ್ಯ ಹಾಗೂ ಸೌಜನ್ಯ ವ್ಯಕ್ತಿಯಿಂದ ಜನಜನಿತವಾಗಿದ್ದವರು.ಮನೆಯಲ್ಲಿ ಮಲಗಿದ ಅವರನ್ನು ಕರೆತಂದು ಕಾಂಗ್ರೆಸ್ ಟಿಕೆಟ್ ನೀಡಿ ೫ ಸಲ ಸಂಸದರನ್ನಾಗಿ ಮಾಡಿತು.ಅದರಂತೆ ಜನರ ಆಶೋತ್ತರಗಳಿಗೆ ಸ್ಪಂದನೆ ಹಾಗೂ ಅಭಿವೃದ್ಧಿ ಕಾರ್ಯಗಳ ಜೊತೆಗೆ ಪಕ್ಷ ನಿಷ್ಠೆ ಮೆರೆದು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಭದ್ರ ನೆಲೆ ಕಲ್ಪಿಸಿದ್ದರು. ಅವರ ಅಕಾಲಿಕ ನಿಧನದ ನಂತರ ಅವರ ಹಿರಿಯ ಮಗ ಬಿ.ವಿ.ನಾಯಕರಿಗೆ ಪಕ್ಷ ಟಿಕೆಟ್ ನೀಡಿ ಸಂಸದರನ್ನಾಗಿ ಆಯ್ಕೆಯಾಗುವಂತೆ ನೋಡಿಕೊಂಡಿತು.ಆದರೆ ತಂದೆಯಂತೆ ಅವರು ಕ್ಷೇತ್ರದ ಮೇಲೆ ಹಿಡಿತವನ್ನು ಸಾಧಿಸಲಿಲ್ಲ. ಹೀಗಾಗಿ ಅವರು ಸೋಲು ಅನುಭವಿಸಿದ್ದರೂ ಅವರನ್ನು ಪಕ್ಷ ಜಿಲ್ಲಾಧ್ಯಕ್ಷರನ್ನಾಗಿ ಮಾಡಿತ್ತು. ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಡುವುದಕ್ಕೆ ವರಿಷ್ಠರ ಮಟ್ಟದಲ್ಲೂ ರಾಜ್ಯ ನಾಯಕರಲ್ಲೂ ಜಿಲ್ಲಾ ಮಟ್ಟದಲ್ಲೂ ವಿರೋಧವೇ ಇರಲಿಲ್ಲ. ಬದಲಿಗೆ ದೇವದುರ್ಗ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಹೇಳಿದ್ದಾಗ್ಯೂ ಅದನ್ನು ತಿರಸ್ಕರಿಸಿ ಈಗ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್ ಮನಸ್ಸುಗಳಿಗೆ ಕಾಂಗ್ರೆಸ್ ಕಾರ್ಯಕರ್ತರಿಗೂ ನೋವುಂಟಾಗಿದೆ ಎಂದು ಆಕ್ರೋಶ ಉಂಟಾಗಿದೆ.ಮಾನ್ವಿಯಲ್ಲೂ ಪ್ರಜ್ಞಾವಂತರ ಸರಿಯಾದ ತೀರ್ಪು ಕೊಡಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಮಹ್ಮದ್ ಜಮೀರ್ ಅಹ್ಮದ್ , ಮಾರೂಖ್ ಖಾನ್ ಇದ್ದರು.