
ಮಾನ್ವಿ,ಆ.೦೩ – ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋ ಶಾಲೆಯಲ್ಲಿ ಹಸಿರು ದಿನಾಚರಣೆ ಕಾರ್ಯಕ್ರಮಕ್ಕೆ ಶಾಲೆಯ ಅಧ್ಯಕ್ಷರಾದ ಬಿ.ವಿ.ರೆಡ್ಡಿಯವರು ಚಾಲನೆ ನೀಡಿ ಮಾತನಾಡಿ ಶಾಲೆಯ ಮಕ್ಕಳಿಗೆ ಹಾಗೂ ಪಾಲಕರಿಗೆ ಹಸಿರಿನ ಮಹಾತ್ವವನ್ನು ತಿಳಿಸುವ ಉದ್ದೇಶದಿಂದ ಹಸಿರು ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಸಿರು ದಿನ ಕಾರ್ಯಕ್ರಮ ಅಂಗವಾಗಿ ಹಸಿರು ತರಕಾರಿಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಕ್ಕಳಿಗೆ ಹಿಸಿರು ತರಾಕಾರಿಗಳಾದ ಬೆಂಡೆಕಾಯಿ ,ಮೆಣಸಿನ ಕಾಯಿ, ಸೋರೆಕಾಯಿ,ಕಲ್ಲಂಗಡಿ ಹಣ್ಣು,ಬಳೆ,ಆಶೋಕ ಟ್ರೀ,ಅಶ್ವಥ ಮರ,ಸೇರಿದಂತೆ ಇತರೆ ಸಸ್ಯ ಹಾಗೂ ತರಕಾರಿಗಳ ಛದ್ಮವೇಶವನ್ನು ಹಾಕಿ ಅವುಗಳ ವಿವರಣೆಯನ್ನು ಮಕ್ಕಳು ನೀಡಿದರು.
ಯು.ಕೆ.ಜಿ ತರಗತಿಯ ಶ್ರೀಯಾ ಹಾಗೂ ಕು.ಆರಾಧ್ಯಾ ಅಚ್ಚುಕಟ್ಟಗಿ ನಿರೂಪಣೆ ಮಾಡಿದ್ದು ವಿಶೆಷವಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ಬಿ.ಪದ್ಮಾವತಿ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ರೆಡ್ಡಿ, ಸದಸ್ಯರಾದ ಸುಷ್ಮಾರೆಡ್ಡಿ, ಖಜಾಂಚಿ ಭಾಸ್ಕರ ರೆಡ್ಡಿ, ಮುಖ್ಯಗುರು ಸರ್‌ಮತ್‌ಖಾನ್ ಶಿಕ್ಷಕರಾದ ಸ್ವರೂಪಾರಾಣಿ, ಜಯಸುಧಾ, ನಫೀಸಾ ಬಾನು, ಕಾವ್ಯ, ವಿಜಯಲಕ್ಷ್ಮೀ, ಕೆ.ಸುಧಾ, ಸತ್ಯಶ್ರೀ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.