ಬಿ ವಿಜಯ ರಾಜೇಂದ್ರರಿಗೆ ಪಿಎಚ್.ಡಿ. ಪದವಿ ಪ್ರದಾನ

ರಾಯಚೂರು,ಸೆ.೦೫-
ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯದಲ್ಲಿ ಸೋಮವಾರದಂದು ಕನ್ನಡ ಭಾಷಾಧ್ಯಯನ ವಿಭಾಗದ ಡೀನ್ ರಾದ ಎ.ಎಫ್.ಟಿ.ಹಳ್ಳಿ ಹಿಂದಿ ಇವರ ಅಧ್ಯಕ್ಷತೆಯಲ್ಲಿ ಪಿಎಚ್.ಡಿ. ಪದವಿಯ, ಮೌಖಿಕ ಪರೀಕ್ಷೆಯನ್ನು ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ರಾಯಚೂರಿನ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ, ಬಿ ವಿಜಯ ರಾಜೇಂದ್ರ ಇವರು ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಪಕರಾದ ಡಾ. ನಾಗಣ್ಣ ಕಿಲಾರಿ ಇವರ ಮಾರ್ಗದರ್ಶನದಲ್ಲಿ “ಹೈದರಾಬಾದ ಕರ್ನಾಟಕದ ಕಥಾಸಾಹಿತ್ಯದ ಭಾಷಾ ಸ್ವರೂಪ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾರ್ಗದರ್ಶಕರಾದ ಡಟಿ. ನಾಗಣ್ಣ ಕಿಲಾರಿ, ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಮಹಾದೇವಯ್ಯ, ಪ್ರಾಧ್ಯಾಪಕರಾದ ಡಾ. ಅಶೋಕ ಕುಮಾರ ರಂಜೇರೆ, ಡಾ.ಪಾಂಡುರಂಗ ಬಾಬು, ಬಾಹ್ಯ ಮೌಲ್ಯಮಾವಕರಾಗಿ ಆಗಮಿಸಿದ ದಾವಣಗೆರೆ ವಿಶ್ವವಿದ್ಯಾಲಯದ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸರಾದ, ಡಾ. ಜೋಗನಕಟ್ಟೆ ಮಂಜುನಾಥ್, ಆಂತರಿಕ ವಿಷಯ ತಜ್ಞರಾದ ಡಾ. ಚನ್ನವೀರಪ್ಪ ಉಪಸ್ಥಿತರಿದ್ದರು.