ಬಿ.ಮಹೇಶ್ವರಪ್ಪಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ

 ಜಗಳೂರು.ಜು.೧೯; ಸಮಾಜದಲ್ಲಿ ಇನ್ನೂ ಬಡತನದಿಂದ ಜನರು ಮುಕ್ತವಾಗಿಲ್ಲ. ಹಸಿವು ತಾಂಡವಾಡುತ್ತಿರುವ ನೀಗಿಸುವ ಕಾರ್ಯಕ್ಕೆ ಮತ್ತು ನಾಡು-ನುಡಿಗಾಗಿ ನನ್ನ ಜೀವವನ್ನೇ ಮುಡಿಪಾಗಿಡುವೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಹೇಳಿದರು.ಬೆಂಗಳೂರು ನಗರದ ಕನ್ನಡ ಭವನದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ಸಮಾಜ ಸುಧಾರಕರು ವಿವಿಧ ಗಣ್ಯರು ಹಾಗು ಡಾ.ರಾಜರತ್ನ ಪುನೀತ್ ರಾಜ್ ರಾಜಕುಮಾರ್ ಅಂಗರಕ್ಷಕರ ಸಮ್ಮುಖದಲ್ಲಿ “ರಾಷ್ತ್ರೀಯ ರಾಜ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ” ಸ್ವೀಕರಿಸಿ ಅವರು ಮಾತನಾಡಿದರು.ಮನುಷ್ಯನಿಗೆ ಬೇಕಿರುವುದು ಎರಡು ತುತ್ತು ಅನ್ನ. ಹಸಿದವರಿಗೆ ಊಟ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡಿದರೆ ಕೋಟಿ ಪುಣ್ಯ ಬರುತ್ತದೆ. ಜಗಳೂರಿನ ತಾಲೂಕಿನ ಎಲ್ಲಾ ಸಮುದಾಯದ ಜನರು ನನ್ನನ್ನು ಸ್ನೇಹ ಜೀವಿಯಾಗಿ ನೋಡುತ್ತಿದ್ದಾರೆ.ನಾನೂ ಸಹ ಬಡತನದಿಂದ ಕಟ್ಟಿಗೆಯನ್ನು ಮಾರಿ ಬೆಳೆದು ಬಂದವನು. ನಾನು ಒಬ್ಬ ದಿನಗೂಲಿ ನೌಕರರಾಗಿ ಕೆಲಸ ಮಾಡಿ ಇಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ನನ್ನ ತಂದೆ ತಾಯಿಯ ಪರಿಶ್ರಮ ಬಹಳ ಇದೆ ನಾನು ಕೂಡ ನಮ್ಮ ಕುಟುಂಬದಲ್ಲಿ ಸಾಕಷ್ಟು ಕಷ್ಟ-ನೋವು ನಲಿವುಗಳನ್ನು ಅನುಭವಿಸಿದ್ದೇನೆ. ಹೀಗಾಗಿ ಯಾರೇ ಬಂದರೂ ನನಗೆ ಎಷ್ಟೇ ಕಷ್ಟಗಳಿದ್ದರೂ ಅದನ್ನು ಲೆಕ್ಕಿಸದೆ ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದರು.

Attachments area

ReplyForward