ಬಿ.ಬಿ.ಹೊಸೂರಪ್ಪರವರಿಗೆ ರಾಷ್ಟ್ರೀಯ ವೈದ್ಯರತ್ನ ಪ್ರಶಸ್ತಿ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ನ.10: ಸಾಮಾಜಿಕ ಸೇವೆಯನ್ನು ಗುರುತಿಸಿ ನನಗೆ ರಾಷ್ಟ್ರೀಯ ವೈದ್ಯರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದರಿಂದ ಮತ್ತೊಷ್ಟು ಸೇವೆ ಮಾಡಲು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಬಾಗಳಿ ಎಲುಬು ಮತ್ತು ಕೀಲು ನಾಟೀ ವೈದ್ಯ ಪಂಡಿತ ಬಿ.ಬಿ.ಹೊಸೂರಪ್ಪ ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 67ನೇ ಕನ್ನಡ ರಾಜೋತ್ಸವ ಸಂಭ್ರಮ, ಅಖಿಲ ಕರ್ನಾಟಕ ಕವಿಗಳ 10ನೇ ಸಮ್ಮೇಳನ ಹಾಗೂ ಸಾಧಕರಿಗೆ 31ನೇ ವಾರ್ಷಿಕ ರಾಷ್ಟ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಸನ್ಮಾನ ಸಮಾರಂಭದಲ್ಲಿ ರಾಷ್ಟ್ರೀಯ ವೈದ್ಯರತ್ನ ಪ್ರಶಸ್ತಿ ಸ್ವೀಕರಿಸಿ ನಂತರ ಮಾತನಾಡಿದರು.
ಈಗಾಗಲೇ ನಾನೂ ನಮ್ಮ ತಂದೆಯ ಕಾಲದಿಂದಲೂ ಅವರ ನಾಟೀ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದೇನೆ ಸಾವಿರಾರು ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾ, ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುವುದರ ಮುಖಾಂತರ ಬಡವರಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದೇನೆ ನನ್ನ ಸೇವೆಯನ್ನು ಪರಿಗಣಿಸಿ ಅನೇಕ ಸಂಘ, ಸಂಸ್ಥೆಗಳು ನನಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ ಪ್ರಸಕ್ತ ವರ್ಷದಲ್ಲಿ ರಾಷ್ಟ್ರೀಯ ವೈದ್ಯಕೀಯ ರತ್ನ ಪ್ರಶಸ್ತಿಯನ್ನು ನೀಡಿರುವುದು ಸಂತಸ ತಂದಿದೆ ಎಂದರು.
ಪತ್ರಕರ್ತ ರಮೇಶ ಸುರ್ವೆ ಅವರು ತಮ್ಮ ಟ್ರಸ್ಟ್ ಮೂಲಕ ಸರ್ಕಾರ ಮಾಡದಿರುವ ಕೆಲಸವನ್ನು ಮಾಡುತ್ತಿದ್ದು, ಕಳೇದ 31ವರ್ಷಗಳಿಂದ ಅನೇಕ ಸಮಾಜ ಮುಖಿ ಕೆಲಸಗಳನ್ನು ಮತ್ತು ಕಲಾವಿದರು, ಕ್ರೀಡಾ ಸಾಧಕರು, ಸಾಹಿತಿಗಳು, ಪತ್ರಕರ್ತರು ಸೇರಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ಹಾಗೂ ಸನ್ಮಾನ ಮಾಡುತ್ತಿರುವ ಅವರಿಗೆ ಸರ್ಕಾರ ಸೂಕ್ತ ಸಹಾಯ, ಸಹಕಾರ ನೀಡಬೇಕು ಎಂದರು.
ವಿವಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ವಿವಿದ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಲ್ಲೇಶ್ವರ ಕ್ಷೇತ್ರದ ವನಕಲ್ಲುಮಠದ ಡಾ.ಬಸವರಮಾನಂದ ಮಹಾಸ್ವಾಮಿ, ಬೆಂಗಳೂರು ವಿದ್ಯಾಮಹಾಸಂಸ್ಥಾನದ ಸಾದ್ವಿ ಯೋಗಿನಿ ಮಾತಾ, ಬಾಜಪ ಒಬಿಸಿ ರಾಜ್ಯಾದ್ಯಕ್ಷ ಡಾ.ನೆ.ಲ.ನರೇಂದ್ರಬಾಬು, ಸಮ್ಮೇಳಾನದ್ಯಕ್ಷ ಸಿದ್ದರಾಮ ಹೊನ್ಕಲ್, ಚಲನಚಿತ್ರದ ನಿರ್ದೇಶಕ, ಟ್ರಸ್ಟ್ ಅದ್ಯಕ್ಷ ರಮೇಶ ಸುರ್ವೆ, ಗೌರವಾದ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಪರ್ಸೋನಾ ಮಿಸ್ ಇಂಡಿಯಾ ಹೇಮಾ ಟಿ.ನಿರಂಜನ, ಚಲನಚಿತ್ರ ಕಲಾವಿದೆ ಮೀನಾ ಸೇರಿದಂತೆ ಇತರರು ಇದ್ದರು.
ನ4-ಎಚ್‍ಆರ್‍ಪಿ-1: ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ನಾಟೀ ವೈದ್ಯ ಪಂಡಿತ ಬಿ.ಬಿ.ಹೊಸೂರಪ್ಪ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ರಾಷ್ಟ್ರೀಯ ವೈದ್ಯಕೀಯ ರತ್ನ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಲ್ಲೇಶ್ವರ ಕ್ಷೇತ್ರದ ವನಕಲ್ಲುಮಠದ ಡಾ.ಬಸವರಮಾನಂದ ಮಹಾಸ್ವಾಮಿ, ಬೆಂಗಳೂರು ವಿದ್ಯಾಮಹಾಸಂಸ್ಥಾನದ ಸಾದ್ವಿ ಯೋಗಿನಿ ಮಾತಾ, ಬಾಜಪ ಒಬಿಸಿ ರಾಜ್ಯಾದ್ಯಕ್ಷ ಡಾ.ನೆ.ಲ.ನರೇಂದ್ರಬಾಬು, ಸಮ್ಮೇಳಾನದ್ಯಕ್ಷ ಸಿದ್ದರಾಮ ಹೊನ್ಕಲ್, ಚಲನಚಿತ್ರದ ನಿರ್ದೇಶಕ, ಟ್ರಸ್ಟ್ ಅದ್ಯಕ್ಷ ರಮೇಶ ಸುರ್ವೆ,ಇದ್ದರು.