ಬಿ.ಪಿ.ಎಸ್.ಸಿ 18ನೇ ವಾರ್ಷಿಕೋತ್ಸವ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.22:  ನಗರದ ಡಾ||ರಾಜ್‍ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‍ನಲ್ಲಿ 18ನೇ ವರ್ಷದ ವಾರ್ಷಿಕೋತ್ಸವ  ಬಿ.ಪಿ.ಎಸ್.ಸಿ ಕಿಡ್ಸ್ ಅಕಾಡೆಮಿ (ಪೂರ್ವ ಪ್ರಾಥಮಿಕ) ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗಿ ಈ ಮಕ್ಕಳ ನೃತ್ಯಗಾನವು ಅತ್ಯಂತ ಮನೋಹರವಾಗಿದ್ದು ನೆರೆದಿದ್ದ ಪ್ರೇಕ್ಷಕರನ್ನೆಲ್ಲ ಸಂತೋಷದ ಕಡಲಲ್ಲಿ ಸೇರಿಸಿತು. ನಂತರ ಶಾಲಾ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವನ್ನು ದೇವಿ ಸರಸ್ವತಿಯ ಪ್ರಾರ್ಥನೆಯನ್ನು 10ನೇ ತರಗತಿಯ ಕುಮಾರಿ ಭಾವನಾ ತಂಡದವರು ಸುಮಧುರವಾಗಿ ಹಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಳ್ಳಾರಿ ನಗರದ ವಿಧಾನಸಭಾ ಸದಸ್ಯರು ನಾರಾ ಭರತ ರೆಡ್ಡಿಯವರು, ಬಳ್ಳಾರಿಯ ನಗರ ಪಾಲಿಕೆಯ ಮಹಾಪೌರರು ಶ್ರೀಮತಿ ಶ್ವೇತಾ, ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‍ನ ಹಾಗೂ ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಅಧ್ಯಕ್ಷರಾದ ಡಾ|| ಎಸ್.ಜೆ.ವಿ.ಮಹಿಪಾಲ್‍ರವರು, ಬಿ.ಐ.ಟಿ.ಎಮ್.ನ ನಿರ್ದೆಶಕರು ಹಾಗೂ ಕುಲಪತಿಗಳು ಕಿಷ್ಕಿಂದ ವಿಶ್ವವಿದ್ಯಾಲಯ ಡಾ|| ಯಶವಂತ್ ಭೂಪಾಲ್‍ರವರು,  ಟಿ.ಇ.ಹೆಚ್.ಆರ್.ಡಿ. ಟ್ರಸ್ಟಿಗಳೆಲ್ಲರನ್ನು, ಶಾಲೆಯ ಶಿಕ್ಷಕಿ, ಆಯಾಷಾರವರು ಸ್ವಾಗತಿಸಿದರು. ನೆರೆದ ಗಣ್ಯಮಾನ್ಯರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಜೆ.ಅನೀಲ್ ಕುಮಾರ್‍ರವರು ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸುತ್ತಾ ಶಾಲೆಯ 18 ವರ್ಷಗಳ ಸಾಧನೆಗಳನ್ನು ವಿವರಿಸುತ್ತಾ ಸತತವಾಗಿ 12 ವರ್ಷಗಳಿಂದ 10ನೇ ತರಗತಿಯ ಪರೀಕ್ಷೆಯಲ್ಲಿ 100% ಫಲಿತಾಂಶ ಬರುತ್ತಿರುವುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಾರಾ ಭರತ್ ರೆಡ್ಡಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾ ಭರತ ರೆಡ್ಡಿಯವರು ತಮ್ಮ ಬಾಲ್ಯದ ಸವಿ ನೆನಪು ಮಾಡಿಕೊಳ್ಳುತ್ತ, ಶಿಕ್ಷಣದ ಮಹತ್ವದ ಬಗ್ಗೆತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ|| ಯಶವಂತ್ ಭೂಪಾಲ್‍ರವರು ಉನ್ನತ ವಿಧ್ಯಭ್ಯಾಸಕ್ಕಾಗಿ ವಿಧ್ಯಾರ್ಥಿಗಳು ಆಯ್ಕೆ ಮಾಡಬಹುದಾದ ವಿವಿಧ ಕೋರ್ಸ್‍ಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಹಾಗೂ ಬಿಪಿಎಸ್‍ಸಿ ಶಾಲೆಯ ಅಧ್ಯಕ್ಷರಾದ ಡಾ||ಎಸ್.ಜೆ.ವಿ.ಮಹಿಪಾಲ್‍ರವರು ಮಾತನಾಡುತ್ತಾ ವಿಧ್ಯಾರ್ಥಿಗಳು ಚೆನ್ನಾಗಿ ಓದಿ ಶಾಲೆಗೆ ಹೆಸರು ತರಬೇಕೆಂದು ಹಾರೈಸಿದರು.
ನಂತರ 2020 ರಿಂದ 2023 ರವರೆಗೆ 10 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಟಿ.ಭುವನ ಚಂದಿರ 98%, ಶರಣ್ಯ ಕೆ.ಎಸ್. 94%, ಶ್ರೇಯಾ.ಎಮ್ 96% ಹಾಗೂ ಸಹನಾ ಶೇಕಡಾ 96% ಅಂಕಗಳಿಸಿ ವಿಧ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ಕಳೆದ ವರ್ಷದ ಶಾಲೆಯ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ತರಗಾತಿವಾರು ವಿಧ್ಯಾರ್ಥಿಗಳಿಗೆ ಅಕಾಡೆಮಿಕ್ ಎಕ್ಸೆಲೆನ್ಸ್  ಪಾರಿತೋಷಕವನ್ನು ವಿತರಿಸಲಾಯಿತು. ತದನಂತರ ಶಾಲೆಯ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೊನೆಯಲ್ಲಿ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಶಿಲ್ಪಾರವರು ವಂದನಾರ್ಪಣೆಯನ್ನು ನೆರವೇರಿಸಿದರು.