ಬಿ.ಟಿ.ಲಲಿತನಾಯಕ – ಶಿವರಾಜಕುಮಾರ ಗೆ ಜೀವ ಬೇದರಿಕೆ

ಸಿರವಾರ.ಮಾ೨೫- ಮಾಜಿ ಸಚಿವೆ ಹಾಗೂ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಬಿ.ಟಿ.ಲಲಿತಾ ನಾಯಕ ಹಾಗೂ ಚಿತ್ರ ನಟ ಡಾ.ಶಿವರಾಜಕುಮಾರ ಅವರು ಸೇರಿ ನಾಲ್ಕು ಜನ ಪ್ರಭಾವಿ ವ್ಯಕ್ತಿಗಳ ಮೇಲೆ ಕೆಲ ಕಿಡಿಗೇಡಿಗಳು ಕರೆ ಮಾಡಿ, ಪತ್ರದ ಮೂಲಕ ಜೀವ ಬೇದರಿಕೆ ಹಾಕುತ್ತಿರುವುದು ಖಂಡನೀಯವಾಗಿದೆ, ಅಂತವರನ್ನು ಪತ್ತೆ ಹಚ್ಚಿ ಕಾನೂನ ಕ್ರಮಕೈಗೊಳುವಂತೆ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಶೇಖರಪ್ಪ ರಾಠೋಡ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಕೆಲ ಕಿಡಿಗೇಡಿಗಳು ಪತ್ರದ ಮೂಲಕ, ದೂರವಾಣಿಯ ಮೂಲಕ ಮಾಜಿ ಸಚಿವೆ ಹಾಗೂ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ, ಕನ್ನಡ ಚಲನ ಚಿತ್ರ ನಟ ಡಾ.ಶಿವರಾಜಕುಮಾರ, ಪಬ್ಲಿಕ್ ಟಿವಿ ಸಂಪಾದಕ ರಂಗನಾಥ, ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಕರೆ ಮಾಡಿ ಹಾಗೂ ಪತ್ರಗಳನ್ನು ಹಾಕುವ ಮೂಲಕ ಜೀವ ಬೇದರಿಕೆ ಹಾಕುತ್ತಿರುವುದು ಖಂಡೀನಿಯವಾಗಿದೆ. ಬಿ.ಟಿ. ಲಲಿತಾ ನಾಯಕ ಅವರು ಸಾಮಾಜಿಕ ಚಿಂತಕರು, ಮೌಡ್ಯ ವಿರೋಧಿಗಳು ಆಗಿದ್ದಾರೆ. ಇಂತವರ ಮೇಲೆ ಆಗಾಗ ಇಂತಹ ಜೀವ ಬೇದರಿಕೆ ಕರೆಗಳು, ಪತ್ರಗಳು ಬರುತ್ತಿರುವುದರಿಂದ ಅವರು ಜೀವನದಲ್ಲಿ ನೊಂದಿದ್ದಾರೆ. ಈ ವಿಷಯವನ್ನು ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾ ನಿರ್ಧೇಶಕರು ಗಂಭೀರವಾಗಿ ಪರಿಗಣಿಸಿ ಈ ನಾಲ್ಕು ಜನರಿಗೆ ಸೂಕ್ತ ರಕ್ಷಣೆ ನೀಢುವ ಮೂಲಕ ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಖೇಮಣ್ಣ ರಾಠೋಡ್, ಪ್ರ.ಕಾ ರಾಮಕೃಷ್ಣ, ಕಾನೂನು ಸಲಹೆಗಾರ ಡಾಕೂ ನಾಯಕ್ ಸೇರಿದಂತೆ ಇನ್ನಿತರರು ಇದ್ದರು.