ಬಿ.ಜೆ.ಪಿ. ಮಹಿಳಾ ಮೋರ್ಚಾದಿಂದ ಸುಕನ್ಯ ಸಮೃದ್ಧಿ ಪಾಸ್ ಬುಕ್ ವಿತರಣೆ

ಸುಳ್ಯ, ನ.೩- ಸುಳ್ಯ ಮಂಡಲ ಬಿ.ಜೆ.ಪಿ. ಮಹಿಳಾ ಮೋರ್ಚಾದ ವತಿಯಿಂದ ೬೫ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಅಂಚೆ ಕಛೇರಿಯ ಮುಖಾಂತರ ಖಾತೆಯನ್ನು ತೆರೆದಿದ್ದು, ಇದರ ಪಾಸ್‌ಬುಕ್‌ನ್ನು ಎಡಮಂಗಲದಲ್ಲಿ ಶಾಸಕ ಎಸ್.ಅಂಗಾರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸುಳ್ಯ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷೆ ಶುಭದಾ ಎಸ್. ರೈ, ಬಿಜೆಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಗೌಡ ದೊಳ್ತಿಲ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ಎಡಮಂಗಲ ಹಾಲು ಉತ್ಪಾದಕರ ಸ.ಸಂಘದ ನಿರ್ದೇಶಕ ಈಶ್ವರ್ ಗೌಡ ಜಲ್ತಾರು, ಮಹಿಳಾ ಮೋರ್ಚಾದ ಸದಸ್ಯರು, ಗ್ರಾಮಸ್ಥರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.