ಬಿ.ಜೆ.ಪಿ.ಮಂಡಲ ಸಮಿತಿ ವತಿಯಿಂದ ಸೇವಾ ಭಾರತಿ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ

ಸುಳ್ಯ, ಮೇ ೩೧-ಕೊರೊನಾದಿಂದ ನಿಧನ ಹೊಂದಿದವರನ್ನು ತಮ್ಮ ಸೇವೆಯ ಮೂಲಕ ಶವಸಂಸ್ಕಾರ ಮಾಡಿದ ಎಂಟು ಜನ ಕಾರ್ಯಕರ್ತರನ್ನು ಬಿ.ಜೆ.ಪಿ.ಮಂಡಲ ಸಮಿತಿಯಿಂದ ಸನ್ಮಾನ ಕಾರ್ಯಕ್ರಮ ಸುಳ್ಯ ಸಿ.ಎ.ಬ್ಯಾಂಕ್ ನಲ್ಲಿ ಭಾನುವಾರ ನಡೆಯಿತು.
ಈ ವರೆಗೆ ೧೪ ಜನರ ಶವ ಸಂಸ್ಕಾರ ನಡೆಸಿದ್ದಾರೆ.ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು,ನ.ಪಂ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ಸಿ.ಎ.ಬ್ಯಾಂಕ್ ನ ಅಧ್ಯಕ್ಷ ಹರೀಶ್ ಬೂಡುಪನ್ನೆ ಸೇವಾ ಭಾರತಿ ಕಾರ್ಯಕರ್ತರಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಕಾರ್ಯಕರ್ತರು ಭಾಗವಹಿಸಿದ್ದರು.