ಬಿ.ಜೆ.ಪಿ. ಕಾಂಗ್ರೆಸ್ ಪಕ್ಷದ ವಿಚಾರ ಮಾತನಾಡುವುದಿಲ್ಲ – ಸೊಮಪ್ಪ


ಸಂಜೆವಾಣಿ ವಾರ್ತೆ
ಸಂಡೂರು :ಫೆ:27 ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷದ ವಿಚಾರವಾಗಲಿ, ಸಂಡೂರು ಕ್ಷೇತ್ರದ ಶಾಸಕರಾದ ಈ. ತುಕರಾಂ ಅವರ ಬಗ್ಗೆ ಮಾತನಾಡಿ ನಾವು ಸಣ್ಣತನವನ್ನು ತೋರುವುದು ಬೇಡ. ಈಗಾಗಲೇ ಪ್ರತಿ ಗ್ರಾಮದಲ್ಲೂ ನಾನು ಪಾದಯಾತ್ರೆಯನ್ನ ಮಾಡಿದ್ದೇನೆ. ಪ್ರತಿ ಗ್ರಾಮದಲ್ಲೂ ಬಿ.ಜೆ.ಪಿ. ಕಾಂಗ್ರೆಸ್ ದುರಾಡಳಿತದ ಬಗ್ಗೆ ಜನ ಬೇಸರ ವ್ಯಕ್ತ ಪಡಿಸುತ್ತಾರೆ. ಹಲವಾರು ಮುಖಂಡರು ಜೆ.ಡಿ.ಎಸ್. ಕುಟುಂಬ ರಾಜಕಾರಣ ಮಾಡುತ್ತಿದೆ. ಜೆ.ಡಿ.ಎಸ್. ಗೆ ಮತ ಹಾಗಿದರೆ ಕಾಂಗ್ರೆಸ್‍ಗೆ ಮತ ಹಾಕಿದಂತೆ ಎನ್ನುವ ಮಾತುಗಳನ್ನಾಡಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಮತದಾರರಿಗೆ ಈ ಬಾರಿಯ ಚುನಾವಣವಣೆಯಲ್ಲಿ ಯಾರನ್ನ ಗೆಲ್ಲಿಸಬೇಕು ? ಎನ್ನುವದನ್ನ ಮನದಟ್ಟು ಮಡಿಕೊಂಡಿದ್ದಾರೆ. ಪ್ರತಿಯೋಂದುಪಕ್ಷದಲ್ಲೂ ಕುಟುಂಬ ರಾಜಕರಣವಿಲ್ಲವೇನು ? ಜೆ.ಡಿ.ಎಸ್. ಪಕ್ಷ ಅಪ್ಪ ಮಕ್ಕಳ ಪಕ್ಷವಲ್ಲ ಇದು ಮತದಾರರ ಪಕ್ಷ. ಜಾತಿ ರಹಿತ ಪಕ್ಷ. ಇದುವೇ ಜ್ಯಾತ್ಯಾತೀತ ಪಕ್ಷ. ಕುಮಾರಸ್ವಾಮಿಯವರ ಸಾದನೆ ಅದ್ಬುತವಾಗಿದ್ದು, ಅವರು ಮುಖ್ಯಮಂತ್ರಿಗಳಾದಾಗ ಅವರ ಮಾಡಿದ ಜನ ಪರ ಕೆಲಸ ಮನೆ ಮನೆಗೂ ತಿಳಿಸುವುದರ ಮೂಲಕ ಮತದಾರರನ್ನು ಜಾಗೃತಿ ಗೊಳಿಸುವುದೇ ನನ್ನ ಮೊದಲನೇ ಪ್ರಮುಕ ಗುರಿಯಾಗಿದ್ದು, ಮೂಂದಿನ ಚುನಾವಣೆಯಲ್ಲಿ ಜೆ.ಡಿ.ಎಸ್. ಅಧಿಕಾರಕ್ಕೆ ಬಂದು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕಾಗಿರುವುದರಿಂದ ನಿಮ್ಮ ಅಮೂಲ್ಯವಾದ ಮತವನ್ನು ಜೆ.ಡಿ.ಎಸ್. ಪಕ್ಷಕ್ಕೆ ಹಾಕುವದರ ಮೂಲಕ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ. ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಕುರೇಕುಪ್ಪ ಎನ್. ಸೋಂಪ್ಪನವರು ಮತದಾರರಲ್ಲಿ ಮನವಿ ಮಾಡಿದರು.
ಅವರು 2ನೇ ಹತಂತದ 4ನೇ ದಿನದ ಪಾದಯಾತ್ರೆ ದೇವರ ಬುಡ್ಡೇನಹಳ್ಳಿಯಿಂದ ಪ್ರಾರಂಭಿಸಿ ರಾಜ್ಯಕ್ಕೆ ಕುಮಾರಣ್ಣ ಸಂಡೂರಿಗೆ ಸೋಮಣ್ಣ ಕಾರ್ಯಕ್ರಮ ಮನೆ ಮನೆಗೂ ಕರ ಪತ್ರ ವಿತರಿಸಿ ಗ್ರಾಮದ ಜನರಿಗೆ ಪಂಚರತ್ನ ಯೋಜನೆಗಳ ಬಗ್ಗೆ ತಿಳಿಸುತ್ತಾ ಜೆ.ಡಿ.ಎಸ್. ಲೋಗೊ ಗೋಡೆಗಳ ಮೂಲಕ ಹಾಕುವುದರ ಜೊತೆಗೆ ಜನರಿಗೆ ಅರಿವು ಮೂಡಿಸಿ ಆರ್. ಗೊಲ್ಲರಹಟ್ಟಿ ಬಿ. ಗೊಲ್ಲರಹಟ್ಟಿ, ಬೊಮ್ಮಘಟ್ಟ, ಜಿಗೇನಹಳ್ಳಿ ಗ್ರಾಮದಲ್ಲಿ ಕಾಲಲ್ಲಿ ಪಾದಕ್ಷೆ ಇಲ್ಲದೇ ಜೆ.ಡಿ.ಎಸ್. ಪರ ಮತ ಯಾಚನೆ ಮಾಡಿದರು. ಎಲ್ಲಾ ಗ್ರಾಮಗಳ ಹಿರಿಯರು ಕಾರ್ಯಕರ್ತರು ಯುವಕರು ಜೆ.ಡಿ.ಎಸ್. ಅಭ್ಯರ್ಥಿಯನ್ನ ಅದ್ದರೂರಿಯಾಗಿ ಸ್ವಾಗತಿಸಿದರು. ಎಲ್ಲಾ ಗ್ರಾಮಗಲ ಜನರ ಸಮಸ್ಯೆ ಕುಶೋಲಪರಿಯನ್ನ ವಿಚಾರಿಸಿ ಮತದಾರರಿಗೆ ನಾನಿದ್ದೇನೆ. ಎನ್ನುವ ಭರವಸೆ ನಿಡುವುದರ ಜೊತೆಗೆ ಚೋರನೂರು ಹೋಬಳಿ ಜಿಗೇನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ಥವ್ಯ ಮಾಡಿ ಮತದಾರರನ್ನ ಆಕರ್ಷಿಸುವಲ್ಲಿ ಯಶ್ವಿಯಾದವರು ಜೆ.ಡಿ.ಎಸ್. ಅಭ್ಯರ್ಥಿ. ಜಿಗೇನಹಳ್ಳಿ ಗ್ರಾಮದ ಹೋಟೆಲ್‍ನಲ್ಲ ಚಹಾ ಸೇವನೆ ಮಾಡುವುದರ ಮೂಲಕ ಗ್ರಾಮದವರ ಸಮಸ್ಯೆಯನ್ನ ಆಲಿಸಿದರು.