ಬಿ.ಗಣೇಕಲ್: ಕಾಣೆಯಾದ ಶಿಕ್ಷಕನ ವಿರುದ್ಧ ದೂರು

ಗಬ್ಬೂರು,ಜ.೧೯- ದೇವದುರ್ಗ ತಾಲೂಕಿನ ಬಿ.ಗಣೇಕಲ್ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ. ನಟರಾಜ ಕಾಣೆಯಾಗಿದ್ದಾನೆ ಎಂದು ಬುಧವಾರ ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಿದರು.
ದಿ:೭-೩-೨೨ ರಂದು ಬಿ.ಗಣೇಕಲ್ ಶಾಲೆಗೆ ಕರ್ತವ್ಯಕ್ಕೆ ಹಾಜರಾದ ಸಹ ಶಿಕ್ಷಕ ಕೆ.ನಟರಾಜ ಇವರು ಕೇವಲ ನಾಲ್ಕು ದಿನ ರಜೆ ಕೋರಿ ಇಲ್ಲಿಯವರೆಗೆ ಕಾಣೆಯಾಗಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ಜೆಡೆಪ್ಪ ಸಾಹು ಅದ್ರಿ ಆಗ್ರಹಿಸಿದರು.
ಸದರಿ ಶಾಲೆಯ ಮುಖ್ಯ ಶಿಕ್ಷಕ ಸಿ.ಆರ್.ಪಿ ಬಸವರಾಜ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅವರು ಏಲ್ಲಿ ಸೇವೆ ಸಲ್ಲಿಸಿತ್ತಿದ್ದಾರೋ ಅಥವಾ ರಾಜಕಾರಣಿ ಆಗಿದ್ದಾರೋ ಗೊತ್ತಿಲ್ಲ. ಹತ್ತು ತಿಂಗಳು ಸತತವಾಗಿ ಗೈರಾಗಿರುವ ಸಹ ಶಿಕ್ಷಕ ಕೆ.ನಟರಾಜ ಇವರನ್ನು ಕೂಡಲೇ ಸೇವೆಗೆ ನಿಯೋಜಿಸಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಣೆಯಾದ ಶಿಕ್ಷಕನನ್ನು ಪತ್ತೆ ಹಚ್ಚಿ ಶಾಲೆಗೆ ನಿಯೋಜಿಸಬೇಕು. ದಯಾಳುಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಶಾಲೆಗೆ ಖುದ್ದಾಗಿ ಭೇಟಿ ನೀಡಿ ಕಾಣೆಯಾದ ಶಿಕ್ಷಕನ ಮೇಲೆ ಸೂಕ್ತವಾದ ಕಾನೂನಿನ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜೆಡೆಪ್ಪ ಸಾಹು ಅದ್ರಿ ಬಿ.ಗಣೇಕಲ್ ಅವರು ಒತ್ತಾಯಿಸಿದರು.