ಕಲಬುರಗಿ,ಜು.26: ರಾಜ್ಯದಲ್ಲಿ ಈಡಿಗ ಬಿಲ್ಲವ, ನಾಮಧಾರಿ ಧೀವರ ಸೇರಿದಂತೆ 26 ಪಂಗಡಗಳ ಜೊತೆ ಅತಿ ಹಿಂದುಳಿದ ವರ್ಗಗಳ ಜಾತಿಗಳ ಒಕ್ಕೂಟವನ್ನು ರಚನೆ ಮಾಡಲು ಸೆ. 9ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿದೆ ಎಂದು ಕಲಬುರ್ಗಿ ಚಿತಾಪುರ ತಾಲೂಕಿನ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳು ತಿಳಿಸಿದ್ದಾರೆ.
ಕಲ್ಬುರ್ಗಿಯ ಜಗತ್ ಆಮಂತ್ರಣ ಸಭಾಂಗಣದಲ್ಲಿ ಕರೆದಾಳು ಮಠದ ಟ್ರಸ್ಟ್ ಗಳ ಮತ್ತು ಸಮಾಜದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಈಡಿಗ ಬಿಲ್ಲವ ಸಮುದಾಯದ ಹಿರಿಯ ಮುಖಂಡರು ರಾಷ್ಟ್ರಮಟ್ಟದಲ್ಲಿ ಹಿರಿಯ ನಾಯಕರಾದ ಬಿಕೆ ಹರಿಪ್ರಸಾದ್ ಅವರನ್ನು ಕಡೆಗಣಿಸುವುದರ ಮೂಲಕ ಅತಿ ಹಿಂದುಳಿದವರ ನಾಯಕರನ್ನು ತುಳಿಯುವ ಹುನ್ನಾರ ನಡೆಯುತ್ತಿದ್ದು ಅದರ ವಿರುದ್ಧವಾಗಿ ಅಹಿಂದ ಮಾದರಿಯಲ್ಲಿ ಅತಿ ಹಿಂದುಳಿದ ವರ್ಗಗಳ ಒಕ್ಕೂಟವನ್ನು ರಚನೆ ಮಾಡಿ ರಾಜ್ಯದಲ್ಲಿ ರಾಜಕೀಯ ಶಕ್ತಿಯನ್ನು ಎತ್ತಿ ತೋರಿಸುವುದಲ್ಲದೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ವಾಗಿ ಬೆಳೆಯಲು ಹಾಕಿ ಕೊಂಡುಕೊಳ್ಳುವ ಬಗ್ಗೆ ಚಿಂತನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು ಹಿಂದುಳಿದ ನಾಯಕರಾಗಿ ಜಾತ್ಯಾತೀತ ನೆಲೆಯಲ್ಲಿ ಕೆಲಸ ಮಾಡಿದ ರಾಷ್ಟ್ರ ಮತ್ತು ರಾಜ್ಯದಲ್ಲಿ ಹಿರಿಯ ನಾಯಕರಾಗಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯರಾದ ಬಿ. ಕೆ ಹರಿಪ್ರಸಾದ್ ಅವರನ್ನು ಮೂಲೆಗುಂಪು ಮಾಡುವ ಹುನ್ನಾರದ ವಿರುದ್ಧ ಈಡಿಗ ಬಿಲ್ಲವ ನಾಮಧಾರಿ ಹಾಗೂ ಅತಿ ಹಿಂದುಳಿದ ಸಮುದಾಯಧ ಸುಮಾರು ಹತ್ತು ಸಾವಿರ ಮಂದಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿ ವಿಶೇಷ ಸಭೆ ನಡೆಸಲಿದ್ದು ಆ ಸಭೆಯಲ್ಲಿ ವಿಸ್ತೃತ ರೂಪರೇಷೆಗಳು ಹೊರಹೊಮ್ಮಲಿದೆ ಎಂದು ಸ್ವಾಮೀಜಿ ಹೇಳಿದರು. ಈಡಿಗ ಸಮುದಾಯದ ಎಸ್ ಬಂಗಾರಪ್ಪ ,ಆರ್ ಎಲ್. ಜಾಲಪ್ಪ, ಬಿ ಜನಾರ್ದನ ಪೂಜಾರಿ ಅವರನ್ನು ಇದೇ ರೀತಿಯಾಗಿ ಕಡೆಗಣಿಸಿ ಮೂಲಗುಂಪು ಮಾಡಲಾಗಿದ್ದು ಅದರ ಮುಂದುವರಿದ ಭಾಗವಾಗಿ ಬಿ ಕೆ ಹರಿಪ್ರಸಾದ್ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ಸಾಗುತ್ತಿದೆ. ಆದರೆ ಇಂತಹ ಷಡ್ಯಂತರದ ವಿರುದ್ಧ ಇಡೀ ಸಮಾಜವು ಬಿಕೆ ಹರಿಪ್ರಸಾದ್ ಅವರ ಬೆನ್ನ ಹಿಂದೆ ಇದೆ ಎಂಬುದನ್ನು ಸಂಬಂಧಪಟ್ಟ ನಾಯಕರು ಗಮನಿಸಬೇಕು ಪಕ್ಷಾತೀತವಾಗಿ ಸಮುದಾಯದ ಎಲ್ಲ ನಾಯಕರಿಗೆ ಸದಾ ಬೆಂಬಲ ಇದ್ದು ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅರಮನೆ ಮೈದಾನದಲ್ಲಿ ನಡೆಯುವ ಸಭೆಗೆ ಕೇಂದ್ರ ಸಚಿವರಾದ ಶ್ರೀಪಾದ ಎಸ್ಸೋ ನಾಯಕ್ ತೆಲಂಗಾಣದ ಸಚಿವರಾದ ಶ್ರೀನಿವಾಸ ಗೌಡ ಆಂಧ್ರದ ಸಚಿವರಾದ ಜೋಗಿ ರಮೇಶ್ ಕೇರಳದ ಸಚಿವರಾದ ಏ.ಕೆ ಶಶಿಂದ್ರನ್, ಚೆನ್ನೈನಿಂದ ತಿರುಚೆಂಡೂರು ಅನಿತಾರಾಧಾಕೃಷ್ಣನ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಅಹಿಂದದ ಮೂಲಕ ಜನಪ್ರಿಯತೆ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ 104 ಜಾತಿಗಳಿದ್ದರೂ ಅತಿ ಹಿಂದುಳಿದ ಜನಾಂಗಕ್ಕೆ ಯಾವುದೇ ರೀತಿಯ ಸಮಾನವಾದ ಪಾಲುಗಾರಿಕೆ ನೀಡದೆ ಕಡೆಗಣಿಸಲಾಗಿದೆ. ಒಟ್ಟು 24 ನಿಗಮಗಳಲ್ಲಿ ಏಳು ನಿಗಮಗಳಿಗೆ ರೂ.260 ಕೋಟಿ ರೂಪಾಯಿ ಮಂಜೂರು ಮಾಡಿ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮ ಸೇರಿದಂತೆ ಇತರ 17 ನಿಗಮಗಳಿಗೆ ಯಾವುದೇ ಹಣ ಮಂಜೂರಾತಿಯ ಪ್ರಸ್ತಾಪ ಮಾಡದೆ ಕಡೆಗಣಿಸಿರುವುದು ನಿರ್ಲಕ್ಷ್ಯದ ಧೋರಣೆ ಎಂದು ಸ್ವಾಮೀಜಿಯವರು ಖಂಡಿಸಿದರು. ಸೆಪ್ಟೆಂಬರ್ 9 ರಂದು ಈಡಿಗ ಬಿಲ್ಲವ ಸೇರಿದಂತೆ ಅತ್ಯಂತ ಹಿಂದುಳಿದ ಕಾಯಕ ಸಮಾಜದ ಸ್ವಾಮೀಜಿಗಳು ಗಣ್ಯರು ಪಾಲ್ಗೊಂಡು ಐತಿಹಾಸಿಕ ಸಭೆಯಾಗಲಿದೆ ಮತ್ತು ಬಿ.ಕೆ ಹರಿಪ್ರಸಾದ್ ಅವರ ಭವಿಷ್ಯದ ರಾಜಕೀಯಕ್ಕೆ ದೊಡ್ಡ ಶಕ್ತಿಯನ್ನು ತುಂಬಲಿದೆ . ಸಮುದಾಯದ ಎರಡನೇ ಬಂಗಾರಪ್ಪ ಎಂಬ ಖ್ಯಾತಿಗೆ ಹರಿಪ್ರಸಾದ್ ಅವರನ್ನು ಮುಂಚೂಣಿ ನಾಯಕರನ್ನಾಗಿ ಮಾಡಲು ಸಮುದಾಯ ಘಂಟಾನುಘೋಷವಾದ ಬೆಂಬಲವನ್ನು ವ್ಯಕ್ತಪಡಿಸಲಿದೆ ಎಂದು ಅವರು ಹೇಳಿದರು.
ಕರದಾಳು ಶಕ್ತಿ ಪೀಠದ ಟ್ರಸ್ಟ್ ಮತ್ತು ಸಮುದಾಯದ ಪ್ರಮುಖರಲ್ಲಿ ಸತೀಶ್ ಗುತ್ತೇದಾರ್ ವೆಂಕಟೇಶ್ ಕಡೇಚೂರ್ ಕುಪೇಂದ್ರ ಗುತ್ತೇದಾರ್, ಡಾ. ಸದಾನಂದ ಪೆರ್ಲ ಬಾಲರಾಜ ಗುತ್ತೇದಾರ್ ನಿತಿನ್ ಗುತ್ತೇದಾರ್ ಸುರೇಶ ಗುತ್ತೇದಾರ ಕರದಾಳ್ ಹುಸನಯ್ಯ ಗುತ್ತೇದಾರ್ ಗುರಪ್ಪ ಗುತ್ತೇದ ರಾವೂರು, ಎ ಇ ತಿಮ್ಮಪ್ಪ ಬಿ.ಎಂ ರಾವೂರು, ಬಸಯ್ಯ.ತೆಲ್ಲೂರ್ ಗುತ್ತೇದಾರ್ ಮತಿತರು ಭಾಗವಹಿಸಿದ್ದರು.