ಸಂಜೆವಾಣಿ ವಾರ್ತೆ
ಸಂಡೂರು :ಏ:22: 2023ನೇ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯ. ವಾರ್ಷಿಕ ಪರೀಕ್ಷೆಯಲ್ಲಿ ಶೇ. 42% ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ 36 ವಾಣಿಜ್ಯ ವಿಭಾಗದಲ್ಲಿ 6 ಅಗ್ರ ಶ್ರೇಣಿಯಲ್ಲಿ ಉತ್ತೀರರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದ ಎಲ್ಲಾ ವಿಷಯಗಳು ಹಾಗೂ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ ಜೀವಶಾಸ್ತ್ರ, ಮತ್ತು ಭಾಷೆಗಳಾದ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಶೇ 100% ಫಲಿತಾಂಶ ಬಂದಿರುತ್ತದೆ. ವಿದ್ಯಾರ್ಥಿನಿ ರಕ್ಷಾ 580 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಗಳಿಸಿರುತ್ತಾರೆ. ಆಕಾಂಕಶ 564, ಅನುರಾಧ 559, ನಿಶಾ ಪಿ.ಎಸ್. 558, ಜಿ.ಎಂ. ಸಂಜಯ 555 ಕೀರ್ತಿ ಕೆ.ಎಂ. 554, ಪಿ. ಶರಣ್ಯ 554 ಎಂ.ಡಿ. ಅಖಿಲಾ 553 ಅಂಕಗಳನ್ನು ಪಡೆದಿರುತ್ತಾರೆ ಎಂದು ಪದವಿಪೂರ್ವ ಕಾಲೇಜಿನ ಕೆ.ಬಿ. ಮೋಹನ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆಲ್ಲದೇ ಕಾಲೇಜಿಗೆ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿ / ನಿಯವರನ್ನ ಅಭಿನಂದಿಸಿದ್ದಾರೆ.