ಬಿ.ಕೆ. ಅನಂತಕುಮಾರ ಯುವ ಕಾಂಗ್ರೇಸ್ ಕಾರ್ಯದರ್ಶಿ

ಸಂಡೂರು.:ಮಾ:26: ತಾಲೂಕಿನ ಯುವ ಮುಖಂಡರಾದ ಬಿ.ಕೆ. ಅನಂತಕುಮಾರವರನ್ನು 2ನೇ ಬಾರಿಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಘಟಕದ ಕಾರ್ಯದರ್ಶಿಯಾಗಿ ಅಯ್ಕೆಯನ್ನು ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ರಕ್ಷಾ ರಾಮಯ್ಯ ಆಯ್ಕೆ ಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಯ್ಕೆಯಾದ ತಾಲೂಕು ಯುವ ಕಾಂಗ್ರೇಸ್ ಮುಖಂಡ ಬಿ.ಕೆ. ಅನಂತಕುಮಾರ ಮಾತನಾಡಿ ಪಕ್ಷ ನಿಷ್ಠೆ ಮತ್ತು ಪಕ್ಷ ಸಂಘಟನೆಯ ಕಾರ್ಯಗಳನ್ನು ಪರಿಗಣಿಸಿ ಮತ್ತು ಉತ್ತಮ ಸಾಮಾಜಿಕ ಕಾರ್ಯಗಳನ್ನು ಮನಗಂಡು 2ನೇ ಬಾರಿಗೆ ರಾಜ್ಯ ಘಟಕಕ್ಕೆ ಆಯ್ಕೆ ಮಾಡಿದ್ದು ಹೆಮ್ಮೆಯನ್ನು ತಂದಿದೆ, ಅಲ್ಲದೆ ಜವಾಬ್ದಾರಿಯನ್ನು ನೀಡಿದೆ, ಈ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಮೂಲಕ ಪಕ್ಷ ಸಂಘಟನೆ ಮಾಡುತ್ತೇನೆ, ಒಗ್ಗಟ್ಟಿನಲ್ಲಿ ಬೆಳವಣಿಗೆ ಸಾಧಿಸಲು ಶ್ರಮಿಸುತ್ತೇನೆ ಎಂದರು.