ಸಿಂಧನೂರು,ಜೂ.೧೦-
ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ದಲಿತ ವಿಮೋಚನಾ ಸೇನೆಯ ರಾಜ್ಯಾಧ್ಯಕ್ಷರಾದ ಮಹಾ ಮುನಿರಾಜು ಹಾಗೂ ರಾಯಚೂರು ಜಿಲ್ಲಾಧ್ಯಕ್ಷರಾದ ಹನುಮೇಶ ಮೈತ್ರಿ ಅವರ ಮಾರ್ಗದರ್ಶನದಲ್ಲಿ ಪ್ರೊಫೆಸರ್ ಬಿ. ಕೃಷ್ಣಪ್ಪನವರ ೮೫ನೇ ಜಯಂತೋತ್ಸವ ಕಾರ್ಯಕ್ರಮ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.
ಕಲ್ಯಾಣ ಕರ್ನಾಟಕ ವಿಭಾಗೀಯ ಸಹ ಸಂಚಾಲಕರಾದ ವೀರಣ್ಣ ಸುಲ್ತಾನಪುರ ಬಿ.ಕೃಷ್ಣಪ್ಪ ಅವರ ನ್ಯಾಯಯುತವಾದ ಆದರ್ಶದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ದೌರ್ಜನ್ಯವನ್ನು ಖಂಡಿಸುವ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ. ಬಡವರ ದೀನದಲಿತರ ಏಳಿಗೆಗಾಗಿ ಶ್ರಮಿಸಿದ ಬಿ.ಕೃಷ್ಣಪ್ಪ ಅವರ ಕಾರ್ಯಶ್ಲಾಘನೀಯ ಇಂತಹ ಆದರ್ಶ ವ್ಯಕ್ತಿಗಳ ಜಯಂತೋತ್ಸವ ಕಾರುಣ್ಯ ಆಶ್ರಮದಲ್ಲಿ ಆಚರಿಸುವುದು ನನಗೆ ಹರ್ಷ ತಂದಿದೆ ಎಂದರು.
ಜಿಲ್ಲಾ ದಲಿತ ವಿಮೋಚನಾ ಸೇನೆಯ ಅಧ್ಯಕ್ಷರಾದ ಹನುಮೇಶ ಮೈತ್ರಿ ಮಾತನಾಡಿ ಬಿ.ಕೃಷ್ಣಪ್ಪ ಅವರ ಬಡವರ ದೀನ ದಲಿತರ ಪರ ಹೋರಾಟಗಳು ಮಾದರಿಯಾಗಿದೆ. ಅವರ ಜೀವನದ ಸಾವಿರಾರು ಹೋರಾಟಗಳು ದೌರ್ಜನ್ಯ, ಅನ್ಯಾಯದ ವಿರುದ್ಧ ನೊಂದ ಜೀವಿಗಳ ಪರ ಹೋರಾಟ ಮಾಡುವ ಮೂಲಕ ಸಮಾನತೆಯ ಹರಿಕಾರರಾದ ಬಿ.ಕೃಷ್ಣಪ್ಪ ಅವರ ಸಾಮಾನ್ಯ ಜೀವನ ಅವರ ಹೋರಾಟದ ಜೀವನ ನಾವ್ಯಾರು ಊಹಿಸಲಾಗುವುದಿಲ್ಲ. ಇಂತಹ ಒಬ್ಬ ನಾಯಕರ ಜಯಂತಿಯನ್ನು ದಾನಿಗಳ ಸಹಾಯದೊಂದಿಗೆ ಅನಾಥರ ಬಾಳಿಗೆ ಬೆಳಕಾಗಿರುವ ಕಾರುಣ್ಯ ಆಶ್ರಮಕ್ಕೆ ನಮ್ಮ ಸಂಘಟನೆ ಬೆನ್ನೆಲುಬಾಗಿರುತ್ತದೆ ಎಂದರು.
ನಿಸ್ವಾರ್ಥತೆಯ ಬದುಕನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬಿ. ಕೃಷ್ಣಪ್ಪ ಅವರ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕು ಎಂದರು ದಲಿತ ಸಂಘಟನೆಯ ಮುಖಂಡರುಗಳಾದ ಹುಲಗಪ್ಪ ಜಾಲಿಹಾಳ, ಮಲ್ಲಿಕಾರ್ಜುನ ದೀನಸಮುದ್ರ, ಮರಿಯಪ್ಪ ೭ನೇ ಮೈಲ್ ಕ್ಯಾಂಪ್, ಸೋಮು ೭ನೇ ಮೈಲ್ ಕ್ಯಾಂಪ್, ಬಂದೇನವಾಜ್, ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ, ಇಂದುಮತಿ ಏಕನಾಥ, ಗೀತಾ ಕುಲಕರ್ಣಿ, ಮರಿಯಪ್ಪ ಹಾಗೂ ಆಶ್ರಮದ ವೃದ್ಧರು ಕಾರ್ಯಕ್ರಮದಲ್ಲಿ ಭಾಗವಸಿದ್ದರು.