ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.31: ನಿಮ್ಮೊಳಗಿರುವ ದ್ವನಿಯನ್ನು ಎಂದೂ ಅಲಕ್ಷಿಸಬೇಡಿ ಅದರ ನಿರೀಕ್ಷೆಯಂತೆ ಪ್ರಯತ್ನಗಳನ್ನು ಮಾಡಿ ಕನಸುಗಳನ್ನು ಸಾಕ್ಷಾತ್ಕರಿಸಿಕೊಳ್ಳಿ ಎಂದು ಲೆಕ್ಕ ಪರಿಶೋಧಕ ಶ್ರೀಪ್ರಿಯ ಬೆಲ್ಡೋಣ, ಕರೆ ನೀಡಿದರು.
ನಗರದ ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಬಿ.ಕಾಂ (ಟಿ.ಪಿಪಿ) ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ”ಉತ್ಸರ್ಜನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ನಾನು ನನ್ನ ಪದವಿಯನ್ನು ಈ ಕಾಲೇಜಿನಲ್ಲಿ ಓದಿದ್ದಾನೆ ಎಂದರು.
ಚಾರ್ಟರ್ಡ್ ಅಕೌಂಟೆಂಟ್ ಎ.ಕಾವ್ಯ ಮಾತನಾಡಿ, ಸೇವೆ, ಅಧ್ಯಯನ ಮತ್ತು ದ್ಯಾನಗಳು ನಮ್ಮ ವ್ಯಕ್ತಿತ್ವಗಳನ್ನು ಮೇಲೆತ್ತುವುದಲ್ಲದೆ ಸುತ್ತಲಿನ ಸಮಾಜವನ್ನು ಸಮೃದ್ದಿಗೊಳಿಸುತ್ತದೆ. ಇತ್ತೀಚೆಗೆ ಶ್ರೀಲಂಕಾ ಬೆಳವಣಿಗೆಗಳನ್ನು ಕಂಡಾಗ ಇನ್ನುಮುಂದೆ ಆರ್ಥಿಕತೆಗೆ ಎಷ್ಟು ಪ್ರಾಧಾನ್ಯತೆ ಕೊಡಬೇಕೆಂಬುದು ಮನವರಿಕೆಯಾಗುತ್ತದೆ ಎಂದರು.
ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ ನಾಗರಾಜ್‍ರವರು ಮಾತನಾಡಿ, ಪದವಿಯನ್ನು ಮುಕ್ತಾಯಗೊಳಿಸುತ್ತಿರುವ ಈ ಸಂದರ್ಭದಲ್ಲಿ ಮುಂದಿನ ಯೋಜನೆಗಳನ್ನು ಸಕಾರಾತ್ಮಕವಾಗಿ ನಿರ್ಧರಿಸಿಕೊಳ್ಳಿ ಅಸಾದ್ಯವೆಂಬುದು ಇಲ್ಲ ಎಂದು ತಿಳಿಸಿದರು.
ಸಮಾರಂಭದಲ್ಲಿ ಎಸ್.ಜಿ.ಟಿ ಮಹಾವಿದ್ಯಾಲಯದ ಅಧ್ಯಕ್ಷರಾದ ಎಸ್.ಎನ್.ರುದ್ರಪ್ಪ, ಬಿ.ಕಾಂ. (ಟಿ.ಪಿ.ಪಿ) ಪ್ರಭಾರಿ ಮುಖ್ಯಸ್ಥರಾದ ಪ್ರಾದ್ಯಾಪಕಿ ಸಾವಿತ್ರಿ, ಎಸ್.ಜಿ.ಟಿ ಮಹಾವಿದ್ಯಾಲಯದ ಖಜಾಂಚಿಗಳಾದ ಜಿ.ಮಂಜುಳ, ಪಿ.ಯು ಪ್ರಾಚಾರ್ಯರಾದ ಜಿ.ತಿಪ್ಪೇರುದ್ರ, ಪ್ರಾದ್ಯಾಪಕರುಗಳಾದ ಡಾ. ಪ್ರಕಾಶ್ ಸಾರಂಗ್‍ಮಟ್, ಅನಿತ, ಅನುಷ, ಮೇಘನ, ಅಯೇಷ, ಸುಪರ್ಣಸಿಂಗ್, ಅಕ್ಷತಾರಾಜ್, ನಂದಿನಿ ಮುಂತಾದವರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಪೂಜ ಮತ್ತು ಚಂದ್ರಿಕ ತಂಡ, ಕಾರ್ಯಕ್ರಮ ನಿರೂಪಣೆಯನ್ನು ರಶ್ಮಿ ಎಸ್.ಆರ್, ನಾಗರ್ಶಿತ, ಸ್ವಾಗತವನ್ನು ದಿವ್ಯ ಮತ್ತು ವಂದನಾರ್ಪಣೆಯನ್ನು ಚಂದ್ರಿಕ ಇವರುಗಳು ನಡೆಸಿಕೊಟ್ಟರು ಹಾಗು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.