ಬಿ.ಎ ಅಂತಿಮ : ರಾಜ್ಯಕ್ಕೆ 7 ನೇ ರ್ಯಾಂಕ್

ಹುಮನಾಬಾದ :ಜು.22:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಅಡಿಯಲ್ಲಿ ನಡೆಯುವ ಪಟ್ಟಣದ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್‍ನ ರಾಮಚಂದ್ರ ವೀರಪ್ಪ ಪದವಿ ಮಹಾವಿದ್ಯಾಲಯದಲ್ಲಿ 2021 ನೆಯ ಸಾಲಿಗಾಗಿ ನಡೆದ ಬಿ.ಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ತಾಲ್ಲೂಕಿನ ಹುಡಗಿ ಗ್ರಾಮದ ಭಾಗ್ಯಶ್ರೀ ಬಸವರಾಜ 7 ನೇ ರ್ಯಾಂಕ್ ಗಿಟ್ಟಿಸಿಕೊಳ್ಳುವ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ . ವಿದ್ಯಾರ್ಥಿನಿ ಸಂಸ್ಥೆಯ ಅಧ್ಯಕ್ಷ ಮಾಣಿಕಪ್ಪ ವಿವೇಕಾನ 0 ದ ಸಾಧನೆಗೆ ಗಾದಾ , ಚಾರಿಟೇಬಲ್ ಟ್ರಸ್ಟನ ದತ್ತಿಗಳು ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ ಎಂ.ಗಾದಾ , ಕಾರ್ಯದರ್ಶಿ ವೆಂಕಟೇಶ ಜಾಜಿ , ಜಂಟಿ ಕಾರ್ಯದರ್ಶಿ ಅನೀಲ ಪಲ್ಲೆರಿ , ಪ್ರಾಚಾರ್ಯ ಡಾ.ಗಿರೀಶ ಕಠಳ್ಳಿ , ಉಪಪ್ರಾಚಾರ್ಯ ಮಹಾದೇವರೆಡ್ಡಿ ಭಿವಾಡಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ .