ಬಿ.ಎಸ್-6 ಇಂಧನದಲ್ಲಿ ಯಾವುದೇ ವ್ಯತ್ಯಾಸವಿಲ್ಲ


ದಾವಣಗೆರೆ: ಸರ್ಕಾರಿ ಸ್ವಾಮ್ಯ, ಖಾಸಗಿ ಸೇರಿದಂತೆ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುತ್ತಿರುವ ಬಿ.ಎಸ್-೬ ಇಂಧನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್‍ಸ್ ಅಸೋಸಿಯೇಷನ್ ಅಧ್ಯಕ್ಷ ಎ.ಬಿ.ಶಂಭುಲಿಂಗಪ್ಪ ಸ್ಪಷ್ಟಪಡಿಸಿದರು.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಮಾತನಾಡಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಖಾಸಗಿ ಕಂಪನಿಗಳಾದ ರಿಲಯನ್ಸ್, ಎಸ್ಸಾರ್, ಎಂಆರ್‌ಪಿಎಲ್, ಶೆಲ್‌ಗಳಲ್ಲಿ ಮಾರಾಟ ಮಾಡುತ್ತಿರುವ ಬಿ.ಎಸ್-೬ ಇಂಧನ ಒಂದೇ ಆಗಿದ್ದು, ಇದರಲ್ಲಿ ಸಾರ್ವಜನಿಕರಿಗೆ ಯಾವುದೇ ಗೊಂದಲ ಬೇಡ ಎಂದರು.
ಫೆಬ್ರವರಿ ೨೦೨೦ರಿಂದ ಸರ್ಕಾರಿ ಒಡೆತನದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಂದ ಬಿ.ಎಸ್-೬ ಇಂಧನವನ್ನು ಎಲ್ಲಾ ಇಂಧನ ಕೇಂದ್ರಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಏಪ್ರಿಲ್ ೨೦೨೦ರಿಂದ ಖಾಸಗಿ ಕಂಪನಿಗಳೂ ಅಧಿಕೃತವಾಗಿ ಬಿ.ಎಸ್-೬ ಇಂಧನ ಮಾರಾಟ ಪ್ರಾರಂಭಿಸಿವೆ. ಕರ್ನಾಟಕ ಒಂದೇ ಟರ್ಮಿನಲ್, ಡಿಪೋದಿಂದಲೇ ಎಲ್ಲಾ ಕಡೆಗೆ ಇಂಧನ ಪೂರೈಕೆಯಾಗುತ್ತಿದೆ. ಗ್ರಾಹಕರು ಸಹ ಎಲ್ಲಾ ಇಂಧನ
ಕೇಂದ್ರಗಳಲ್ಲಿ ಇಂಧನದ ಗುಣಮಟ್ಟ, ಪ್ರಮಾಣ ಪರಿಶೀಲಿಸಲು ಸಂಪೂರ್ಣಅಧಿಕಾರ ಉಳ್ಳವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಡಿ.ಎಸ್.ಸಿದ್ದಣ್ಣ, ವಿನಯಕುಮಾರ್ ಹಾಜರಿದ್ದರು.