ಬಿ.ಎಸ್.ಪಿ. ಅಭ್ಯರ್ಥಿಯನ್ನು ಹೆಗಲ ಮೇಲೆ ಹೊತ್ತು ತಂದ ಬೆಂಬಲಿಗರು


ಸಿರುಗುಪ್ಪ : ಸಿರುಗುಪ್ಪ ವಿಧಾನಸಭೆ ಪ.ಪಂ. ಮೀಸಲು ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಹಳ್ಳಿಮರದ ವೀರೇಶ ರವರನ್ನು ನೂರಾರು ಬೆಂಬಲಿಗರು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸುತ್ತಾ ನಾಮಪತ್ರ ಸಲ್ಲಿಕೆಗೆ ಕರೆತಂದರು.
ಬಿ.ಎಸ್.ಪಿ.ಜಿಲ್ಲಾಧ್ಯಕ್ಷ ಮುನಿಸ್ವಾಮಿ ಹಾಗೂ ಪಕ್ಷದ ಅಭಿಮಾನಿಗಳು ಇದ್ದರು.