
ಹುಮನಾಬಾದ್ :ಸೆ.17:ಬೀದರ್ ಜಿಲ್ಲೆಯ ಬಿ ಎಸ್‍ಎಸ್ ಕೆ ಪ್ರಾರಂಭಿಸಲು ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿ ಅಧ್ಯಕ್ಷ ಸುಭಾಷ ಕಲ್ಲೂರ್ ನೀಡಬೇಕು ಎಂದು ರಾಜೀನಾಮೆ ಮಾಜಿ ನಿರ್ದೇಶಕ ಸುಭಾಷ ಗಂಗಾ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಒಂದು ಹಂಗಾಮಿನಲ್ಲಿ 5 ಲಕ್ಷ ಟನ್ ಕಬ್ಬು ನುರಿಸುವ ಸಾಮಥ್ರ್ಯ ಇರುವ ಈ ಕಾರಖಾನೆಯಲ್ಲಿ ಕಳೆದ ಎರಡು ವರ್ಷಗಳ ಹಂಗಾಮಿನಲ್ಲಿ ಬರೀ 50 ಸಾವಿರ ಟನ್ ಕಬ್ಬು ನುರಿಸಲಾಗಿತ್ತು. ಜೊತೆಗೆ ಕಾರಖಾನೆಯನ್ನು ಬಂದ್ ಮಾಡಲಾಗಿದೆ ಎಂದು ಆಗ್ರಹಿಸಿದರು.
ನಿರ್ವಹಣೆ ಮಾಡಿಕೊಂಡು ಹೋಗಲಾಗದೇ ಇಲ್ಲಸಲ್ಲದ ನೆಪವೊಡ್ಡಿ ಜಿಲ್ಲೆಯ ರೈತರು, ಕಾರ್ಖಾನೆ ಕಾರ್ಮಿಕರು, ಕಬ್ಬು ಸಾಗಾಣಿಕೆ ವಾಹನಗಳ ಮಾಲೀಕರು ಸೇರಿದಂತೆ ಎಲ್ಲರನ್ನೂ ಸಂಕಷ್ಟಕ್ಕೀಡು ಮಾಡಿದ್ದಾರೆ. ಸಮಸ್ಯೆ ಯಾರಿಗಿಲ್ಲ, ಹಾಗೆಂದು ಎಲ್ಲರನ್ನೂ ಕಡೆಗಣಿಸಿ, ಬದುಕನ್ನು ಬೀದಿಪಾಲು ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಕಾರ್ಖಾನೆಯಲ್ಲಿ ಆಗಿರುವ ಅವ್ಯವಹಾರದ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿ ಸಮಗ್ರ ಮಾಹಿತಿ ಕಲೆಹಾಕಿ ಅನಿವಾರ್ಯವಾದರೇ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಲು ಹಿಂದೇಟು ಹಾಕುವುದಿಲ್ಲ ಎಂದರು. ಇನ್ನೂ ಸಹಕಾರ ಸಕ್ಕರೆ ಕಾರ್ಖಾನೆಗೆ ಸೇರಿದ ಪೆಟ್ರೋಲ್ ಬಂಕನ್ನು ತಮ್ಮ ಬೆಂಬಲಿಗರೊಬ್ಬರಿಗೆ ನಿಯಮ ಬಾಹೀರವಾಗಿ ಲೀಜ್‍ನಲ್ಲಿ ಕೊಟ್ಟಿದ್ದಾರೆ. ಒಂದು ನಾನು ಮಾಡಿರುವಂಥ ಆರೋಪ ಸುಳ್ಳು ಎಂದು ಕಲ್ಲೂರ್‍ಗೆ ಹೇಳುವುದೇ ಇದ್ದರೇ ವೀರಭದ್ರೇಶ್ವರ ದೇವಸ್ಥಾನ ಹೊಕ್ಕು ಪ್ರಮಾಣ ಮಾಡಲಿ ಎಂದು ಆಗ್ರಹಿಸಿದರು. ಕಾರ್ಖಾನೆ ಮಾಜಿ ನಿರ್ದೇಶಕರೂ ಆದ ಷೇರುದಾರ ಬಸವರಾಜ ರತ್ನಾಪುರೆ ಇದ್ದರು.