ಬಿ.ಎಲ್2 ಮತ್ತು ಶಕ್ತಿಕೇಂದ್ರದ ಸಭೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಅ.07: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಮಾಜಿ ಶಾಸಕರ ನಿವಾಸದ ಅವರಣದಲ್ಲಿ ಭಾರತೀಯ ಜನತಾ ಪಾರ್ಟಿ ಸಿರುಗುಪ್ಪ ವತಿಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯ ಪೂರ್ವ ಸಿದ್ದತಾ ಸಭೆ ಪ್ರಯುಕ್ತ ಬಿ.ಎಲ್.2 ಮತ್ತು ಶಕ್ತಿಕೇಂದ್ರ ಪ್ರಮುಖರ ಸಭೆ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ಮಾತನಾಡಿ ಹಲವಾರು ಸುಳ್ಳು ಭರವಸೆಯ ಯೋಜನೆಗಳನ್ನು ಜನರಿಗೆ  ನೀಡಿ ಈ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ಸುಗಳ ವ್ಯೆವಸ್ಥೆ ಇಲ್ಲದೆ ತುಂಬ ತೋಂದರೆಗಳನ್ನು ಅನುಭವಿಸುತ್ತಿದ್ದರೆ ಮತ್ತು ಪದವಿ ಪಡೆದು ನಿರೋದ್ಯಗಿ ವಿದ್ಯಾರ್ಥಿಗಳಿಗೆ ಎರಡು ಸಾವಿರ ಕೊಡುವ ವಿದ್ಯಾ ನಿಧಿ ಯೋಜನೆಯು ಇಲ್ಲಿಯವರೆಗೂ ಜಾರಿಗೆ ತಂದಿಲ್ಲ, ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯವು ಇನ್ನೂ ಬಹುತೇಕ ಮಹಿಳೆಯರಿಗೆ ದೊರೆತ್ತಿಲ್ಲ ಮತ್ತು ಹಲವಾರು ಸುಳ್ಳು ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು ಅದ್ದರಿಂದ ಇಂತಹ ಸುಳ್ಳು ಭರವಸೆಗಳನ್ನು ನೀಡುವುದರಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮುಖ ಸ್ಥಾನವಿದೆ, ಈ ಗ್ಯಾರಂಟಿ ಕಾರ್ಡಗಳಿಂದ ರಾಜ್ಯವು ಯಾವುದೇ ಅಭಿವೃದ್ದಿ ಹೊಂದಿಲ್ಲ. ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲುಕು ಪಂಚಾಯತಿ ಚುನಾವಣೆಗೆ ನಾವೇಲ್ಲರು ಸಿದ್ದರಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ ಸತೀಶ್ ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕ್ರಪ್ಪ ಮತ್ತು ಮುಖಂಡರಾದ ಉಡೇಗೊಳ ಖಾಜಸಾಬ್, ಕೆ.ಮಾರುತಿ, ವೆಂಕೂಬ, ಈರಣ್ಣ, ಎಂ.ಅರ್ ಬಸವನಗೌಡ, ಕುಂಟ್ನಾಳ್ ಮಲ್ಲಿಕಾರ್ಜುನ, ದಮ್ಮುರು ಸೋಮಪ್ಪ, ಅರ್.ಟಿ ಮಾದಣ್ಣ, ಬಸವರಾಜ, ಹುಲುಗಪ್ಪ, ಪದವಿ ಧರ ಕ್ಷೇತ್ರದ ಆಕಾಂಕ್ಷಿ ಗುರುನಾಥ ಹಾಗೂ ಕಾರ್ಯಕರ್ತರು ಇದ್ದರು.