ಬಿ.ಎಲ್.ಡಿ.ಈ.ಯಲ್ಲಿ ಸೆನ್ಸಾರ್ ಆಧಾರಿತ ಸ್ಯಾನಿಟೈಜರ್ ಯಂತ್ರ ತಯಾರಿ

ವಿಜಯಪುರ, ಸೆ.15-ಅವಶ್ಯಕತೆಗಳು ಅನ್ವೇಷÀಣೆಯ ತಾಯಿ ಎನ್ನುವಂತೆ ಕರೋನಾ ಹಾವಳಿಯಿಂದ ಹೊರಬರಲು ಹಲವಾರು ಅನ್ವೇಷಣೆಗಳು ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಲ್ಲಿ ಹಲವಾರು ಅನ್ವೇಷಣೆಗಳು ನಡೆಯುತ್ತಿರುವ ಈ ಸಂಧರ್ಭದಲ್ಲಿ ವಿಜಯಪುರದ ಬಿ.ಎಲ್.ಡಿ.ಈ ಇಂಜನೀಯರಿಂಗ್ ಮಹಾವಿದ್ಯಾಲಯದ ಲೀಡ್ ವಿದ್ಯಾರ್ಥಿ ಗುರುರಾಜ ಬಡಿಗೇರ ಕಡಿಮೆ ವೆಚ್ಚದ ಸೆನ್ಸಾರ್ ಆಧಾರಿತ ಸ್ಯಾನಿಟೈಜರ್ ಯಂತ್ರ ಅಭಿವೃದ್ಧಿಪಡಿಸಿ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಬಳಕೆಗಾಗಿ ಕಾಲೇಜಿನಲ್ಲಿ ಅಳವಡಿಸಿದ್ದಾರೆ.
ಇಲೇಕ್ಟ್ರೀಕಲ್ ವಿಭಾಗದಲ್ಲಿ ತೃತೀಯ ವರ್ಷದ ಇಂಜನೀಯರಿಂಗ್ ಪೂರೈಸುತ್ತಿರುವ ಲೀಡ್ ವಿದ್ಯಾರ್ಥಿ ಗುರುರಾಜ ಬಡಿಗೇರ್ ಮಾತನಾಡಿ ಲಾಕ್‍ಡೌನ್ ಸಮಯದಲ್ಲಿ ನನ್ನ ರಜಾ ಸಮಯದ ಸದುಪಯೋಗವನ್ನು ಪಡೆದುಕೊಳ್ಳಲು ಯೋಚಿಸುತ್ತಿದ್ದೆ ನನ್ನ ತಾಂತ್ರಿಕ ಶಿಕ್ಷಣದ ಜಾÐನದ ಆಧಾರದ ಮೇಲೆ ಕಡಿಮೆ ವೆಚ್ಚದ ಸ್ಯಾನಿಟೈಜರ್ ಯಂತ್ರ ತಯ್ಯಾರಿಸಿದ್ದೇನೆ ಹಾಗೂ ಮುಂಬರುವ ದಿನಗಳಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ಕಡಿಮೆ ವೆಚ್ಚದಲ್ಲಿ ಈ ಯಂತ್ರವನ್ನು ಅಳವಡಿಸಲು ಯೋಜನೆ ತಯ್ಯಾರಿಸಿಕೊಂಡಿದ್ದೇನೆ ಎಂದರು.
ಇಂಜನೀಯರಿಂಗ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅತುಲ್ ಆಯರೆರವರು ವಿದ್ಯಾರ್ಥಿಯ ಈ ವಿನೂತನ ಪ್ರಯತ್ನಕ್ಕೆ ಅಭಿನಂದಿಸಿ ಇಂvಹ ವನೂತನ ಆಲೋಚನೆಯುಳ್ಳ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದಿಂದ ಸದಾ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀÂಡಲಾಗುವುದು ಎಂದು ಹೇಳಿದರು.
ಮಹಾವಿದ್ಯಾಲಯದ ಉಪನ್ಯಾಸಕ ಗೋವಿಂದ ಮಧಭಾವಿ ರವರು ಮಾತನಾಡುತ್ತಾ ಈ ಹಿಂದೆ ಈ ವಿದ್ಯಾರ್ಥಿ ಗುರುರಾಜ ರೈತ ಸ್ನೇಹಿ ಕಡಿಮೆ ವೆಚ್ಚದ ಯೋಜನೆಯನ್ನು ತಯ್ಯಾರಿಸಿ ಈಗ ಕಡಿಮೆ ವೆಚ್ಚದ ಸ್ಯಾನಿಟೈಜರ್ ಯಂತ್ರ ಅಭಿವೃದ್ದಿಪಡಿಸಿದ್ದು ಸಂತಸ ತಂದಿದೆ ಮತ್ತು ಇತನ ವಿನೂತನ ಅವಿಷ್ಕಾರಗಳಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸುತ್ತದೆ ಎಂದರು.
ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದ ಲೀಡ್‍ನ ಕಾರ್ಯಕ್ರಮ ಸಹ ವ್ಯವಸ್ಥಾಪಕ ಪ್ರಮೋದ ಹುಕ್ಕೇರಿ ಮಾತನಾಡಿ ಲೀಡ್ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುತ್ತಿದೆ ಹೊಸ ಹೊಸ ಅನ್ವೇಷಣೆ ಮತ್ತು ಚಿಂತನೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಆಯ್ದ ಯೋಜನೆಗಳಿಗೆ ಆರಂಭಿಕ ಸೀಡ್ ಫಂಡಿಗ್ ನೀಡುವ ಮೂಲಕ ಉದಯೋನ್ಮುಖ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ನೀವೂ ಖರೀದಿಸಬಹುದುಃ ಕಡಿಮೆ ವೆಚ್ಚದ ಸೆನ್ಸಾರ್ ಆಧಾರಿತ ಸ್ಯಾನಿಟೈಜರ್ ಯಂತ್ರ ಕೊಳ್ಳಲು ಆಸಕ್ತ ಶಾಲಾ, ಕಾಲೇಜು ಮತ್ತು ಸಂಘ ಸಂಸ್ಥೆಗಳ ಬಳಕೆಗೆ ಕೊಳ್ಳಲು ಗುರುರಾಜ ಬಡಿಗೇರ್ 9686737460, 9632474330 ಸಂಖ್ಯೆಗೆ ಸಂಪರ್ಕಿಸಬಹುದು.