ಬಿ.ಎಲ್.ಡಿ.ಇ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್ ಕಾಲೇಜಿಗೆ ಪ್ರಶಸ್ತಿ

ವಿಜಯಪುರ, ಜ.14-ಬೆಂಗಳೂರಿನ ಪ್ರತಿಷ್ಠಿತ ಐಇಇಇ (ಇನಸ್ಟಿಟ್ಯೂಟ್ ಆಫ್ ಇಲೇಕ್ಟ್ರೀಕಲ್ ಆ್ಯಂಡ್ ಇಲೇಕ್ಟ್ರೋನಿಕ್ ಇಂಜನಿಯರಿಂಗ್) ಯು ಇತ್ತೀಚೆಗೆ ನಡೆಸಿದ ವಾರ್ಷಿಕ ಸಮ್ಮೇಳನ 2020ರಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್ ಕಾಲೇಜಿಗೆ ಪ್ರಶಸ್ತಿ ಲಭಿಸಿದೆ ಎಂದು ಪ್ರಾಚಾರ್ಯ ಡಾ.ಅತುಲ್ ಆಯಿರೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಪ್ರೊ.ವೀರೆಶ ಗೊನಾಳ ಔಟ್‍ಸ್ಟ್ಯಾಂಡಿಂಗ್ ಲಾರ್ಜ್ ಸ್ಟುಡೆಂಟ್ ಬ್ರ್ಯಾಂಚ್ ಕೌನ್ಸಿಲರ ಆಗಿ ಮತ್ತು ಪ್ರಸನ್ನ ಮೈದರಗಿ ಔಟ್‍ಸ್ಟ್ಯಾಂಡಿಂಗ್ ಸ್ಟುಡೆಂಟ್ ವೋಲೆಂಟಿಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಇಇಇ ತಾಂತ್ರಿಕ ಚಟುವಟಿಕೆಗಳಲ್ಲಿ ಹಾಗೂ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷ ನಮ್ಮ ಕಾಲೇಜು ಆಯ್ಕೆಯಾಗಿರುವದು ಸಂತಸ ತಂದಿದೆ ಎಂದರು.
ಬಿ.ಎಲ್.ಡಿ.ಇ ಸಂಸ್ಥೆ ಆಡಳಿತಾಧಿಕಾರಿಗಳು, ಕಾಲೇಜು ಸಿಬ್ಬಂದಿ, ಆಡಳಿತ ವರ್ಗ ಈ ಸಾಧನೆಗೆ ಅಭಿನಂದಿಸಿದ್ದಾರೆ.