ಬಿ.ಎಲ್.ಡಿ.ಇಯಿಂದ ವಿಶ್ವ ಅಲ್ಝಿಮರ್ ದಿನ ಆಚರಣೆ

ವಿಜಯಪುರ, ಸೆ.25- ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಜಿರಿಯಾಟ್ರಿಕ್ ಕ್ಲಿನಿಕ್ ವತಿಯಿಂದ ವಿಶ್ವ ಅಲ್ಝಿಮರ್ ದಿನ ಆಚರಿಸಲಾಯಿತು.
ನಗರದ ಹಿರಿಯ ನಾಗರಿಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮರೆಗುಳಿತನದ ಕುರಿತು ಡಾ.ಆನಂದ ಅಂಬಲಿಯವರು ಮಾತನಾಡಿದರು. ವಯೋಸಹಜ ಕಾರಣಗಳಿಂದಾಗಿ ಉಂಟಾಗುವ ಮರೆಗುಳಿತನಕ್ಕೆ ವಿಶೇಷ ಆರೈಕೆ ಮತ್ತು ತರಬೇತಿ ಅತ್ಯವಶ್ಯಕ. ಜಿರಿಯಾಟ್ರಿಕ್ ಕ್ಲಿನಿಕ್ ವತಿಯಿಂದ ನಿರಂತರವಾಗಿ ಆರೈಕೆ ಹಿರಿಯ ನಾಗರಿಕರಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ ಎಂದರು.
ಮನೋವಿಜ್ಞಾನಿ ಡಾ.ಮನೋವಿಜಯ ಕಳಸಗೊಂಡ ಹಿರಿಯ ನಾಗರಿಕರಲ್ಲಿಯೂ ನೆನಪಿನ ಶಕ್ತಿ ಹೆಚ್ಚಿಸಲು ಹಲವು ದಾರಿಗಳ ಕುರಿತು ಹಾಗೂ ಡಿಜಿಟಲ್ ತಂತ್ರಜ್ಞಾನ ಕುರಿತು ಉಪನ್ಯಾಸ ನೀಡಿದರು.
ಹಿರಿಯ ನಾಗರಿಕರಿಗಾಗಿ ನೆನಪಿನ ಸಾಮಥ್ರ್ಯ ಹೆಚ್ಚಿಸುವ ಹಲವು ಆಟಗಳನ್ನು ಆಯೋಜಿಸಲಾಗಿತ್ತು. 50 ಕ್ಕೂ ಹೆಚ್ಚು ಹಿರಿಯ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಆರ್.ಎನ್.ಮೋದಿ, ಬಿ.ಎಸ್.ಹಿಪ್ಪರಗಿ, ಬಿ.ಜಿ.ಕಳಸಗೊಂಡ ಮತ್ತು ವಿ.ಎಸ್.ಸಜ್ಜನ ವಿಜೇತರಾದರು.
ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ ಮಾತನಾಡಿ, ಹಿರಿಯ ನಾಗರಿಕರ ಆರೋಗ್ಯ ಸೇವೆಗಾಗಿ ಪ್ರತ್ಯೇಕ ಜಿರಿಯಾಟ್ರಿಕ್ ಕ್ಲಿನಿಕ್ ಆರಂಭಿಸಿದ್ದು, ಪ್ರತಿ ಮಂಗಳವಾರ ಬೆ.9ಗಂ. ರಿಂದ ಸಂ.5ಗಂ. ರವರೆಗೆ ಈ ಕ್ಲಿನಿಕ್ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಲು ಕೋರಿದರು.