ಬಿ.ಎಲ್.ಓ.ಗಳ ಸಭೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.4: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಹೋಬಳಿ ಮಟ್ಟದ ಬಿಎಲ್ಒ ಗಳ ಸಭೆಯನ್ನು ತಹಶೀಲ್ದಾರ್ ಹೆಚ್.ವಿಶ್ವನಾಥ ಉದ್ಘಾಟಿಸಿ ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಭೆ ಮತ್ತು ಲೋಕ ಸಭಾ ಚುನಾವಣೆಯ ಪ್ರಯುಕ್ತ ಮತದಾರರನ್ನು ಗುರುತಿಸಲು ಬಿಎಲ್ಒ ಗಳು ಮನೆ ಮನೆ ಸಮೀಕ್ಷೆ ಕಾರ್ಯವನ್ನು ನಿರ್ವಹಿಸಲು ತಿಳಿಸಿದರು.
ಶಿರಸ್ತೇದಾರ ರವಿಂದ್ರ, ಗ್ರಾಮ ಲೆಕ್ಕಾಧಿಕಾರಿ ಶಿವರಾಜ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪರಶುರಾಮ, ಪಂಚಾಯಿತಿ ಅಧಿಕಾರಿಗಳಾದ ಶೋಭಾ, ಸುಬ್ರಮಣ್ಯಂ ಇದ್ದರು.