ಬಿ.ಎಲ್.ಓ. ಕೆಲಸಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಬಾರದು

(ಸಂಜೆವಾಣಿ ವಾರ್ತೆ)
ವಿಜಯಪುರ :ಆ.9:ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ವತಿಯಿಂದ ಬಿ.ಎಲ್.ಓ. ಕೆಲಸಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಬಾರದು ಎಂಬುದರ ಕುರಿತು ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಅವರ ಮುಖಾಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂWದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ 6 ವರ್ಷದೊಳಗಿನ ಮಕ್ಕಳನ್ನು ಮುಂದಿನ ಪ್ರಜೆಗಳನ್ನಾಗಿ ರೂಪಿಸುವ ಅತ್ಯಂತ ಮಹತ್ತರದ ಉದ್ದೇಶವನ್ನು ಇಟ್ಟುಕೊಂಡು ಐ.ಸಿ.ಡಿ.ಎಸ್, ಯೋಜನೆ ಪ್ರಾರಂಭವಾಗಿದೆ. 6 ವರ್ಷದೊಳಗಿನ ಮಕ್ಕಳ ಮಾನಸಿಕ ಮಕ್ಕಳ 80% ದೈಹಿಕ ಬೆಳವಣಿಗೆ 40 ಆಗಿರುತ್ತದೆ. ಈ ಹಂತದಲ್ಲಿ ಮಗುವಿಗೆ ಬೇಕಾದ ಆಹಾರ ಆರೋಗ್ಯ ಮತ್ತು ಶಿಕ್ಷಣವನ್ನು ಕೊಡಲಿಕ್ಕಾಗಿ ಪ್ರಾರಂಭಿಸಲಾಗಿದೆ.
ಈಗಾಗಲೇ ರಾಜ್ಯದಲ್ಲಿ 2022-23ರಲ್ಲಿ 50ಲಕ್ಷ ಫಲಾನುಭವಿಗಳಿದ್ದು, 2023-24 ರಲ್ಲಿ 48 ಲಕ್ಷಕ್ಕೆ ಇಳಿದಿದೆ. ಮಾತ್ರವಲ್ಲದೇ, 3 ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಪೂರ್ವ ಪಾಥಮಿಕÀ ಶಿಕ್ಷಣ ಸಿಗುವುದಿಲ್ಲ. ಕಾರ್ಯಕರ್ತರು ತಮ್ಮ ಐ.ಸಿ.ಡಿ.ಎಸ್, ಯೇತರ ಮತ್ತು ಇಲಾಖೇತರ ಯೋಜನೆಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ ಎಂಬ ದೂರು ಸಾಮನ್ಯವಾಗಿರುತ್ತದೆ. ಮಾತ್ರವಲ್ಲದೇ ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತಹೀನತೆಯ ಪ್ರಮಾಣವು ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತೆ ಮಕ್ಕಳೊಡನೆ ಮತ್ತು ಗರ್ಭಿಣಿ ಬಾಣಂತಿಯರೊಡನೆ ಹೆಚ್ಚಿನ ಒಡನಾಟ ಬೇಕಿದೆ. ಆದರೆ ಇಂದು ದಾಖಲೆಗಳನ್ನು ನಿರ್ವಹಿಸುವ ತಾಂತ್ರಿಕ ಕೆಲಸಗಳೇ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡಲು ಆಗುತ್ತಿಲ್ಲ ಎಂದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದಿನಾಂಕ: 17-03-2022 ಮತ್ತು 23-02-2023 ರಂದು ಪತ್ರಗಳನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಬರೆಯಲಾಗಿದೆ. ಆದರೂ ಹೆಚ್ಚುವರಿ ಕೆಲಸಗಳು ನಿಂತಿಲ್ಲ. ಆದ್ದರಿಂದ ಮಹಿಳಾ ಮತ್ತು ಮಕ್ಕಳ, ಅಭಿವೃದ್ಧಿ ಇಲಾಖೆ ಐ.ಸಿ.ಡಿ.ಎಸ್. ಯೋಜನೆಯ ಉದ್ದೇಶಗಳನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಡಬೇಕು, ಮತ್ತು ಕೇಂದ್ರ ಸರ್ಕಾರದ ಇಲಾಖಾ ಸಚಿವರ ಮೂಲಕಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು. ಈಗಾಗಲೇ ಶಿಕ್ಷಕರ ಸಂಘಟನೆಯವರು ಪತ್ರ ಬರೆದು ಕ್ಷೇತ್ರ ಕೆಲಸ ಆಗುವುದಿಲ್ಲ ಎಂದಿದ್ದಾರೆ. ಕ್ಷೇತ್ರ ಕೆಲಸಕ್ಕೆ ಒಬ್ಬರೂ ಬಿ.ಎಲ್.ಓ. ಕೆಲಸಕ್ಕೆ ಒಬ್ಬರೂ ಈ ರೀತಿಯ ತಾರತಮ್ಯದ ಅಭಿಪ್ರಾಯಗಳಿಗೆ ಬದಲಾಗಿ ಚುನಾವಣಾ ಆಯೋಗ ಈ ಮಕ್ಕಳಿಗಾಗಿ ಕೆಲಸ ಮಾಡುವವರನ್ನು ಹೊರತು ಪಡಿಸಲು ಆಗ್ರಹಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜಶ್ವೇರಿ ಸಂಕದ, ಎಸ್.ಪಿ. ಕುಮಾಸ್ತೆ,ದೀಪಾ ಚವ್ಹಾಣ, ಮೆರೊನಿಸಾ ಪಟೆಲ, ಆರೀಪಾ ತುಬಾಕೆ, ಗಂಗಾಬಾಯಿ ಕೊಟ್ಯಾಳ, ಛಾಯಾ ಹಜೇರಿ, ಯಮುನಾ ಬಾವಟಿ, ಉಮಾ ಇಂಚಗೇರಿ, ಗೀತಾ ಬಜಂತ್ರಿ, ಶೀಲಾ ಹಂಚಿನಾಳ, ಗೀತಾ ನಾಯಕ, ಲಕ್ಷ್ಮೀ ಸಿಂದಗಿ, ಸಂಗೀತಾ ಚಲವಾದಿ, ವಿದ್ಯಾ ಬೆಂಕಿ ಮತ್ತಿತರರು ಉಪಸ್ಥಿತರಿದ್ದರು.