ಬಿ.ಎಲ್.ಒ ಗಳ ಸಭೆ; ಬಿಎಲ್ಒ 2.0 ಆಪ್ ನಲ್ಲಿ ಮತದಾರರ ನೊಂದಣಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.19:  ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಬಿ.ಎಲ್.ಒ ಗಳ ಕಾರ್ಯಕ್ರಮ ನಡೆಯಿತು.
ಗ್ಯಾರಂಟಿಗಳ ಅನುಷ್ಠಾನದಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಇಂದು ಜಾರಿಯಾಗಲಿದೆ, ಅದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಯಾಜಮಾನಿಗೆ ಸಿಗುತ್ತದೆ, ಆಧಾರ ಮತ್ತು ರೇಷನ್ ಕಾರ್ಡ್ ಹೊಂದಿರಬೇಕು.
ತೆಕ್ಕಲಕೋಟೆಯಲ್ಲಿ ಮೂರು ಸೇಂಟರ್ ಗಳನ್ನು ತೆರೆಯಲಾಗಿದೆ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಒನ್ ಬಾಪೂಜಿ ಸೇಂಟರ್ ಗಳ ಮೂಲಕ ನೋಂದಣಿಗೆ ಅವಕಾಶ ಮಾಡಲಾಗಿದ್ದು ಸಾರ್ವಜನಿಕರು ಉಚಿತವಾಗಿ ನೊಂದಣಿ ಮಾಡಿಸಿಕೊಳ್ಳುವಂತೆ ತಹಸಿಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ ತಿಳಿಸಿದರು.
ಬಿಎಲ್ ಒಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ 18 ವರ್ಷ ನಡೆಯುತ್ತಿರುವ ಹಾಗು ಮುಕ್ತಾಯಗೊಂಡ ವಯಸ್ಕರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ತಿಳಿಸಿದರು. ಹಾಗೂ ಬಿಎಲ್ಒ 2.0 ಆಪ್  ಮೂಲಕ ನೊಂದಣಿ ಮಾಡುವ ವಿಧಾನದ ಮೂಲಕ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಚುನಾವಣೆ ಸಿರಶ್ಥಿದಾರ ರವೀಂದ್ರಬಾಬಜ  ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಈರಣ್ಣ, ಬಿಎಲ್ಒ ಗಳ ತರಬೇತಿದಾರರಾದ ಶೇಖರಪ್ಪ  ಮೇಗಳಮನಿ, ಬಿ.ಕೆ ಗಣಪತಿ, ಕಂದಾಯಧಿಕಾರಿ ಸುರೇಶ್ ಬಾಬು, ಶಿವರಾಜ ಹಾಗೂ ತಾಲ್ಲೂಕಿನ ಎಲ್ಲಾ ಬಿಎಲ್ಒಗಳು ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು , 117 ಮತಗಟ್ಟೆ ಬಿಎಲ್ಒ ಗಳು ಹಾಗೂ ಇಬ್ಬರು ಬಿಎಲ್ಒ ಮೇಲ್ವಿಚರಕರು ಇದ್ದರು.