ಬಿ.ಎಡ್ ಪರೀಕ್ಷೆ ಮುಂದೂಡಿಕೆ

ಕಲಬುರಗಿ ಏ 18: ಸಾರಿಗೆ ಮುಷ್ಕರ,ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆ ( ಏ 19) ನಡೆಯಬೇಕಿದ್ದ ಬಿ.ಎಡ್ ದ್ವಿತೀಯ ಮತ್ತು ನಾಲ್ಕನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸ್ನಾತಕ ಪದವಿ ಲಿಖಿತ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದ್ದು, ಪರೀಕ್ಷೆಯ ನಿಗದಿತ ದಿನಾಂಕವನ್ನು ನಂತರ ಪ್ರಕಟಿಸಲಾಗುವದು ಎಂದು ಗುಲಬರ್ಗ ವಿಶ್ವವಿದ್ಯಾಲಯದ ಕುಲಸಚಿವ ( ಮೌಲ್ಯ ಮಾಪನ) ಪ್ರೊ ಸೊನರ್ ನಂದಪ್ಪ ಡಿ ತಿಳಿಸಿದ್ದಾರೆ.