
ರಾಯಚೂರು, ಜು.೧೯- ೨೦೧೫-೧೬ ರಿಂದ ಬಿ.ಎಡ್ ಪದವಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮೌಲ್ಯಮಾಪನ ವಿಭಾಗ ಕುಲಸಚಿವರಿಗೆ
ಮನವಿ ಸಲ್ಲಿಸಿ ಒತ್ತಾಯಿಸಿದರು.
ಈಗಾಗಲೇ ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ ಪದವಿ ಮತ್ತು ಸ್ನಾತಕೋತ್ತರ ಯುಜಿ.ಪಿಜಿ ಮತ್ತು ಪದವಿಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ಮಾಡಿಕೊಟ್ಟಿದ್ದೀರಿ ಅದರಂತೆ ಬಿ.ಎಡ್ ವಿದ್ಯಾರ್ಥಿಗಳಿಗೆ ಈ ಸಲ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನವೋದಯ ಬಿ.ಎಡ್ ಪ್ರಾಚಾರ್ಯರ ಡಾ.ಉಮಾಕಾಂತ್, ಚನ್ನಬಸವ ಮೇಟಿ,ಡಾ.ಅಶ್ವಿನ್ ಪುರವಂತ, ಡಾ.ವಿಜಯಕುಮಾರ್ ಕಟ್ಟಿಮನಿ,ಉಪ ಪ್ರಾಚಾರ್ಯ ರಾಜಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.