ಬಿ.ಇಡ್ ಪ್ರವೇಶಾತಿ ಮುಂದೂಡಲು ಒತ್ತಾಯ

ರಾಯಚೂರು,ಜ.೨೨- ಗುಲ್ಬರ್ಗಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಫಲಿತಾಂಶ ವಿಳಂಬವಾದ ಕಾರಣ ಬಿ.ಇಡ್ ದಾಖಲಾತಿ ಪರಿಶೀಲನೆಗೆ ಅಡ್ಡಿಯಾಗಿ ತಿರಸ್ಕೃತವಾಗಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಡಾ. ನಾಗವೇಣಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಿ. ಇಡಿ, ಪ್ರೌಢ ಶಿಕ್ಷಕ ತರಬೇತಿ ಗೆ ಅರ್ಹತೆ ಪಡೆದಿದ್ದರು ಗುಲ್ಬರ್ಗಾ ವಿಶ್ವವಿದ್ಯಾಲಯದ ಬೇಜವಾಬ್ದಾರಿ ನಡೆಯಿಂದ ಅಂಕಪಟ್ಟಿಗಳಿಲ್ಲದೆ.ದಾಖಲಾತಿ ಪರಿಶೀಲನಿಗೆ ಹಾಜರಾಗಲು ಸಾಧ್ಯವಾಗದೆ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ ಎಂದ ಅವರು, ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯ
ಈ ಕೂಡಲೇ ಪ್ರವೇಶಾತಿಯ ದಾಖಲಾತಿ ಪರಿಶೀಲನ ಪ್ರಕ್ರಿಯೆಯನ್ನು ನಿಲ್ಲಿಸಿ ಪ್ರವೇಶಾತಿಯನ್ನು ಮುಂದೂಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಚನ್ನಬಸವ,ಶಿವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.