ಚಾಮರಾಜನಗರ, ಜೂ,01:- ವಿಶ್ವತಂಬಾಕುರಹಿತ ದಿನದ ಅಂಗವಾಗಿ ಬಿ.ಆರ್.ಹಿಲ್ಸ್ ನ ಸುತ್ತಮುತ್ತಲ ಪೆÇೀಡುಗಳಲ್ಲಿಂದು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸ್ಥಳೀಯ ವಿವಿಧ ಶಾಲೆಗಳ ಮಕ್ಕಳಿಂದ ಮನೆ ಮನೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಾಗೃತಿ ನಡಿಗೆಯಲ್ಲಿ ಭಾಗವಹಿಸಿದ್ದ ಮಕ್ಕಳು “ತಂಬಾಕು ಒಬ್ಬ ಕೊಲೆಗಾರ, ಇದರಿಂದದೂರವಿರಿ” ಎಂದುಜೋರಾಗಿ ಘೋಷಣೆ ಕೂಗುತ್ತಾ ತಂಬಾಕಿನ ಸೇವನೆಯಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಎರಕನ ಗದ್ದೆ, ಮುತ್ತುಗದಗದ್ದೆ ಹಾಗೂ ಹೊಸಪೆÇೀಡಿನ ಪ್ರತಿ ಮನೆ ಮನೆಗೂ ಭೇಟಿ ನೀಡಿ ಜಾಗೃತಿ ಪತ್ರಗಳನ್ನು ಹಂಚಿದರು.
ಜಾಗೃತಿ ನಡಿಗೆಯಲ್ಲಿ ಭಾಗವಹಿಸಿದ್ದ ಮಕ್ಕಳು ತಂಬಾಕಿನ ಸೇವನೆಯಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಎರಕನ ಗದ್ದೆ, ಮುತ್ತುಗದಗದ್ದೆ ಹಾಗೂ ಹೊಸಪೆÇೀಡಿನ ಮನೆ ಮನೆಗೂ ಭೇಟಿ ನೀಡಿ ಜಾಗೃತಿ ಪತ್ರಗಳನ್ನು ಹಂಚಿದರು.
ಸೆಂಟರ್ ಫಾರ್‍ಟ್ರೈನಿಂಗ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್‍ಟ್ರೈಬಲ್ ಹೆಲ್ತ್ ಯೋಜನೆಯಡಿಯಲ್ಲಿ ಇನ್ಸ್ಟಿಟ್ಯೂಟ್‍ಆಫ್ ಪಬ್ಲಿಕ್ ಹೆಲ್ತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, ಜಿಲ್ಲಾ ಬುಡಕಟ್ಟುಗಿರಿಜನಅಭಿವೃದ್ಧಿ ಸಂಘ ಹಾಗೂ ಯಳಂದೂರು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಬಿ.ಆರ್. ಹಿಲ್ಸ್‍ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಅಲ್ಲಿನ ಮುಖ್ಯೋಪಾಧ್ಯಾಯರಾದರಂಗಸ್ವಾಮಿಯವರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ರಂಗಸ್ವಾಮಿರವರು, ಮಕ್ಕಳು ಸಮಾಜದ ಭವಿಷ್ಯ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹದಿಹರೆಯದ ಮಕ್ಕಳು ತಂಬಾಕಿನ ದಾಸರಾಗುತ್ತಿದ್ದಾರೆ. ಈ ತಂಬಾಕಿನ ಚಟ ಜೀವನವನ್ನೇ ಹಾಳು ಮಾಡುತ್ತದೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಯಾವುದೇ ಕಾರಣಕ್ಕೂ ಮಕ್ಕಳು ಈ ಚಟದ ದಾಸರಾಗಬಾರದು, ತಂಬಾಕಿನ ಸೇವನೆಯ ದುಷ್ಪರಿಣಾಮದ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ನಿರಂರತವಾಗಿ ಮಕ್ಕಳಿಗೆ ಪ್ರತಿದಿನ ತಂಬಾಕಿನ ದುಷ್ಪರಿಣಾಮದ ಕುರಿತು ಬೆಳಗಿನ ಪ್ರಾರ್ಥನಾ ಸಭೆಯಲ್ಲೇ 2 ನಿಮಿಷ ಜಾಗೃತಿ ಮೂಡಿಸಲಾಗುವುದು ಎಂದರು.
ಮಕ್ಕಳನ್ನುದ್ದೇಶಿಸಿ ಮಾತನಾಡಿದ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆಯ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ಪ್ರಶಾಂತ್ ಎನ್.ಎಸ್ ಅವರು ಸಿನಿಮಾಗಳಲ್ಲಿ ತಂಬಾಕು ಸೇವನೆ ಮಾಡುವುದನ್ನು ನೋಡಿ, ಕುಟುಂಬದಲ್ಲಿನ ಹಿರಿಯರು ಸೇವನೆ ಮಾಡುವುದನ್ನು ನೋಡಿ ಅಥವಾ ಗೆಳೆಯರು ಬಳಸುವುದನ್ನು ನೋಡಿ ಹೆಚ್ಚಿನ ಸಂಖ್ಯೆಯ ಹದಿಯರೆಯದ ಮಕ್ಕಳು ತಂಬಾಕಿನ ಬಳಕೆ ಆರಂಭಿಸುತ್ತಾರೆ, ಒಮ್ಮೆ ಆರಂಭವಾದ ಈ ಚಟವನ್ನು ಬಿಡುವುದು ಬಹಳಾ ಕಷ್ಟ. ಆದರೇ, ಸೂಕ್ತ ಸಮಾಲೋಚನೆ, ಸರಿಯಾದ ವೈದ್ಯಕೀಯ ಸಲಹೆ ಹಾಗೂ, ತಂಬಾಕು ಸೇವನೆ ನಿಲ್ಲಿಸಬೇಕೆಂಬ ಅಚಲ ಮನೋಬಲವಿದ್ದರೆ ಈ ಚಟದಿಂದ ಹೊರಬರಲು ಸಾಧ್ಯವಿದೆ. ಆದ್ದರಿಂದ ಈ ಚಟದಿಂದ ಮುಕ್ತಿ ಪಡೆಯ ಬಯಸುವ ಸ್ಥಳೀಯರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ವಿ,ಜಿ.ಕೆ.ಕೆ ಆಸ್ಪತ್ರೆಯಲ್ಲಿ ಪ್ರತಿ ಶುಕ್ರವಾರ ಹೊಸ ಜೀವನ ಎಂಬ ಹೆಸರಿನಡಿಯಲ್ಲಿ ತಂಬಾಕು ಸೇವನೆ ವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಲಾಗಿದೆ.
ಹೆಚ್ಚಿನ ಸಂಖ್ಯೆಯ ಜನರು ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಅಲ್ಲದೇ, ನಿಮ್ಹಾನ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1800 112356 ಕರೆ ಮಾಡಿ ಕನ್ನಡದಲ್ಲೇ ತಂಬಾಕು ಸೇವನೆಯಿಂದ ವಿಮುಕ್ತಿ ಹೊಂದಲು ಅಗತ್ಯ ಸಲಹೆ ಹಾಗೂ ಆಪ್ತ ಸಮಾಲೋಚನೆ ಸೇವೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಜಾಗೃತಿ ನಡಿಗೆಯಲ್ಲಿ, ಸೆಂಟರ್ ಫಾರ್ ಟ್ರೈನಿಂಗ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಟ್ರೈಬಲ್ ಹೆಲ್ತ್ ಯೋಜನೆಯ ಸಿಬ್ಬಂದಿಗಳು, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಶಾಲೆ ಬಿ ಆರ್ ಹಿಲ್ಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಕನಗದ್ದೆ, ಮುತ್ತುಗದಗದ್ದೆ ಅಂಗನವಾಡಿ ಶಿಕ್ಷಕರು, ಸ್ಥಳೀಯ ಆದಿವಾಸಿ ಸಮುದಾಯದ ಮುಖಂಡರುಗಳು, ವಿಜಿಕೆಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.