ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯ: ನೆಹರು ಜಯಂತಿಯ ಕುರಿತು ರಸ ಪ್ರಶ್ನೆ ಸ್ಪರ್ಧೆ

ರಾಯಚೂರು.ನ.೧೫-ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ ೧೪.೧೧.೨೦೨೨ ರಂದು ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ನೆಹರು ಜಯಂತಿಯ ಅಂಗವಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಭಾರತ ಸರಕಾರದ ಮಿನಿಸ್ಟರಿ ಆಫ್ ಯೂತ್ ಅಫೇರ್‍ಸ್ ಆಂಡ ಸ್ಪೋರ್ಟ್ಸ್, ಕರ್ನಾಟಕ ಸರಕಾರದ ನೆಹರು ಯುವಕೇಂದ್ರ ರಾಯಚೂರು ಇವರ ಸಂಯುಕ್ರಾಶ್ರಯದಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೆಹರು ಯುವ ಕೇಂದ್ರದ ಅಧಿಕಾರಿಗಳಾದ ಬಿಸತ್ ಭರತ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದಿವೆನಾ, ದ್ವಿತೀಯ ಸ್ಥಾನ ಕೀರ್ತನ, ತೃತೀಯ ಸ್ಥಾನ ಕೆ.ಸಿ.ರಮ್ಯಾ, ನಾಲ್ಕನೆಯ ಸ್ಥಾನ ಮಲ್ಲಿಕಾರ್ಜುನ, ಐದನೇಯ ಸ್ಥಾನ ಕೌಸರ ಫಾತೀಮ, ಆರನೇಯ ಸ್ಥಾನ ಮಹ್ಮದ ಸಿರಾಜ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರವ್ಮದಲ್ಲಿ ಉಪ-ಪ್ರಾಚಾರ್ಯರಾದ ಪೂಜಿತ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ರವಳಿಕಾ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸೀಮಾ ಪ್ರಾರ್ಥನೆ ಮಾಡಿದರು. ಸ್ವಾಗತವನ್ನು ಕೃತಿ ತುಪ್ಪಸಕ್ಕರಿ ಮಾಡಿದರು. ಕಾರ್ಯಕ್ರಮದ ನಿರೂಪಣೆ ಸುಕನ್ಯಾ ಮಾಡಿದರು. ವಂದನಾರ್ಪಣೆಯನ್ನು ಕು.ದಿವೆನಾ ಮಾಡಿದರು. ಈ ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.